ಕಲಬುರಗಿಯಲ್ಲಿ ಮುಸ್ಲಿಂ ಬಾಂಧವರಿಂದ ಸರಳ ರೀತಿಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ

0
99

ಕಲಬುರಗಿ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಭಂದದ ಮಧ್ಯೆ ಮುಸ್ಲಿಂ ಬಾಂಧವರ ಪವಿತ್ರ ಈದ್ ಉಲ್ ಫಿತ್ರ್ ಸರಳ ರೀತಿಯಲ್ಲಿ ಮನೆಯಲ್ಲೇ ಇದ್ದು ವಿಶೇಷ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬ ಆಚರಿಸಿದರು.

” ಸಾಂಕ್ರಮಿಕ ರೋಗಗಳು ಇರುವೆಡೆಗೆ ನೀವು ಹೋಗಬೇಡಿ; ಸಾಂಕ್ರಮಿಕ ರೋಗಗಳ ಪ್ರದೇಶದಲ್ಲಿ ನೀವಿದ್ದರೆ ಮನೆಯಲ್ಲೇ ಇರಿ” ಕೊರೊನಾದಂತಹ ಸಾಂಕ್ರಮಿಕ ರೋಗಗಳ ಬಗ್ಗೆ ಪ್ರವಾದಿ ಮಹಮ್ಮದ್ ರು 1400 ವರ್ಷಗಳ ಹಿಂದೆಯೇ ಎಚ್ಚರಿಕೆ ಹೇಳಿದ್ದಾರೆ. ಅದರಂತೆ ನಾಡಿನಾದ್ಯಂತ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿದರು.

Contact Your\'s Advertisement; 9902492681

ಹೊಸ ಬಟ್ಟೆ, ಉಡುಗೆ ತೊಡುಗೆಗಳಿಲ್ಲದೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸದೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಿ ಮನೆಯವರ ಜೊತೆ ಆಚರಿಸಿದರು. ಪರಸ್ಪರ ಹಸ್ತಲಾಘವ, ಅಪ್ಪುಗೆ ಇಲ್ಲದೆ ಎಲ್ಲರೂ ಶುಭ್ರವಾದ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ಹೇಳಿ ಸಂಭ್ರಮಿಸಿದರು.

ಕಲಬುರಗಿಯ ಈದ್ಗಾ ಮೈದಾನ ಸಾಮೂಹಿಕ ಪ್ರಾರ್ಥನೆ ಇಲ್ಲದೆ ಬಿಕೋ ಎನ್ನುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಯಾರೊಬ್ಬರೂ ಈ ಕಡೆ ಸುಳಿಯದಂತೆ ಕಂಡುಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here