ಆ ಸಂದರ್ಭದಲ್ಲಿ ಬರೆದ ಅವರ ಒಂದು ಕವನ ಇಲ್ಲಿದೆ.
ನಾವಿಕ ಎಚ್ಚರ ! ಕಡಿದಾದ ಬೆಟ್ಟ, ಬಾಯಿಬಿಟ್ಟ ಕಣಿವೆ ಮರುಭೂಮಿ ಸುಡುತ್ತ ಸುಡುತ್ತ ಹಿರಿದಾದ ಕಡಲು ಕತ್ತಲಿನ ರಾತ್ರಿ ಮುತ್ತಿಹವು ಸುತ್ತಮುತ್ತ ಪಯಣಿಗನೆ ಕೇಳ ಎಚ್ಚರದಿ ನೋಡ ಸಾಗಬೇಕು ದೂರ ದೂರ ಕುದಿಕುದಿವ ನೀರು ಮೊರೆ ಮೊರೆವ ಅಲೆಯು ಕುಣಿದಿರುವುದು ನಿನ್ನ ನಾವೆ ಬಿರಬಿರನೇ ಗಾಳಿ ಬೀಸುತ್ತ ಬರಲು ದಿಕ್ಕೆಟ್ಟು ತೂರಿತೂರಿ ಇಂತಿರುವ ದೋಣಿ ಚುಕ್ಕಾಣಿ ಹಿಡಿವ ಎಂಟೆದೆಯ ಧೀರ ಯಾರು? ಈಜರಿಯದಂತ ಅಸಹಾ ಯ ದೇಶ ಮುಳುಗಿ ಮುಳುಗಿ ಎದ್ದು ಮುಳಗೆ ತೂಫಾನಿನಲ್ಲೂ ಕಿರು ದೋಣಿಯನ್ನು ನೀ ನಡೆಸೆ ಮುಂದೆ ಮುಂದೆ ಭವಿಷ್ಯವಿಂದು ಬಾ ಧೀರ ಎಂದು ಕರೆದಿಹುದು ಕೈ ಬೀಸಿ ಬೀಸಿ.
ಬಂಧನದಿ ಬಂದ ತಾಯಮುಕ್ತಿಗಾಗಿ ನೀ ಬಾರ ಧೈರ್ಯ ತೋರ ಮುಸ್ಲಿಮರು ಯಾರು,ಯಾರು ಹಿಂದೂವೆಂದು ಕೇಳಿಹರು ಯಾರು ಯಾರು? ಮುಳುಗಿಹನು ಮನುಜ ಸೋದರನು ಎಂದು ಅಂಬಿಗನ ಹೇಳು ಹೇಳು.
ಈ ಬದುಕ ಕುರಿತು ಜಯಗೀತೆ ಹಾಡಿ ಗಲ್ಲುಗಂಬವೆರಿ ಮೆರೆದ ಆ ವೀರರಿಂದು ನಿನ್ನ ಕೇಳುತಿಹರು ‘ ಬಲಿದಾನ, ಎಲ್ಲಿ ಎಲ್ಲಿ? ಕೈಬಿಟ್ಟು ದೇಶ, ಕಾದುವೆಯೆ ಕುಲಕ್ಕೆ? ಕಾಪಿಡುವೆ ಯಾವುದನ್ನು?.
ತೆರೆ ತೆರೆಗಳುರುಳಿ ನೀರ್ ಕೆರಳಿ ಕೆರಳಿ ಹರಿಗೋಲು ತೇಲಿ ಹಾರಿ ಪರೀಕ್ಷೆಯಂತೆ ಇಂದಿಹುದು ಹೌದು ನಮ್ಮೆದುರು ಬಂದು ನಿಂತು ಎಚ್ಚರದಿ ನಿಂತು ಎಚ್ಚರದಿ ನೋಡು ಎಚ್ಚರದಿ ಹುಟ್ಟುಹಾಕು.
ದೇಶದ ಕುರಿತು ಜಾತಿ-ಧರ್ಮದ ಸೌಹಾರ್ದತೆ ಬಗ್ಗೆ ಬಹಳ ವಿಶಾಲವಾದ ಅರ್ಥವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ. ಅದೇ ರೀತಿ ನಾವುಗಳು ಪರಸ್ಪರ ಪ್ರೀತಿ ಭಾವೈಕ್ಯತೆಯಿಂದ ಇದೇ ರೀತಿ ನಾವು ನೀವು ಒಗ್ಗಟಾಗಿ ಇರೋಣ. ಭವ್ಯ ಭಾರತವನ್ನು ಕಟ್ಟೋಣ. ನೂರಾರು ವರ್ಷಗಳಿಂದ ಸೋದರ ಭಾವದಿಂದ ಬೆಳೆದು ಬಂದಂತೆ ಹಿಂದೂ-ಮುಸ್ಲಿಮರ ನಡುವಿನ ಸ್ನೇಹ ಪ್ರೀತಿ ಗೌರವಗಳಿಗೆ ಧಕ್ಕೆಯಾಗದಂತೆ ರಾಜಕೀಯದ ಕುತಂತ್ರದ ಆಟಕ್ಕೆ ಬಲಿಯಾಗದೇ ದೇಶದ ಪ್ರಜಾಪ್ರಭುತ್ವ ಮೌಲ್ಯಗಳು ಮಾನವೀಯ ಗುಣಗಳು ಮತ್ತು ಜಾತ್ಯತೀತ ರಾಷ್ಟ್ರವನ್ನು ಉಳಿಸೋಣ.
ಅಶ್ಫಾ ಕುಲ್ಲಾ ಅಲ್ಲಾಖಾನ್- ರಾಮಪ್ರಸಾದ ಬಿಸ್ಮಿಲ್ಲಾ ಅಂತ ಸೌಹಾರ್ಧಯುತ ಸ್ನೇಹವನ್ನು ನಾವೆಲ್ಲರೂ ಬೆಳಸಿಕೊಳ್ಳೋಣ.
ಮುಸ್ಲಿಂ ಬಾಂಧವರಿಗೆ ಭಾವೈಕ್ಯತೆ ಸಾರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಶಾಂತಿ ಸೌಹಾರ್ದತೆಯ ಸಂಕೇತವಾಗಿರುವ ರಂಜಾನ್ ಹಬ್ಬ ತಮ್ಮೆಲ್ಲರ ಬದುಕಿನಲ್ಲಿ ಸಂತಸ ಸಂಭ್ರಮ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.
ಕೊರೊನಾದಿಂದ ಇಡೀ ಜಗತ್ತೇ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರದೊಂದಿಗೆ ಸುರಕ್ಷಿತವಾಗಿ ಮನೆಯಲ್ಲೇ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಬೇಕೆಂದು ಸಮಸ್ತ ಮುಸ್ಲಿಂ ಸಹೋದರರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ.