ಸಮಾಜಪರಕಾಳಜಿಯಿಂದ ಸುಂದರ ಸಮಾಜ

0
33

ಕಲಬುರಗಿ: ಯಾವುದೇ ವ್ಯಕ್ತಿ ಕೇವಲ ಸ್ವಾರ್ಥ ಜೀವನ ಸಾಗಿಸಿದರೆ ಬದುಕಿಗೆ ಅರ್ಥವಿಲ್ಲ. ತನ್ನಂತೆ ಮತ್ತೊಬ್ಬರ ಜೀವವೆಂಬ ಭಾವನೆ ಬೆಳೆಸಿಕೊಂಡು ಸಮಾಜಕ್ಕೆಸಾಧ್ಯವಾದ ಸೇವೆ ಮಾಡಿದರೆ ಆತ್ಮತೃಪ್ತಿ ದೊರೆಯುವದರ ಜೊತೆಗೆ ಸುಂದರ ಸಮಾಜ ನಿರ್ಮಾಣವಾಗಲುಸಾಧ್ಯವಿದೆಯೆಂದು ಮುಖ್ಯ ಶಿಕ್ಷಕ, ಸಮಾಜ ಸೇವಕ ಮಹ್ಮದಗೌಸ್ ಫಾಶಾ ಹೇಳಿದರು.

ರಂಜಾನ ಹಬ್ಬದ ಪ್ರಯುಕ್ತ ನಗರದ ಕೆಎಚ್ಬಿಬಡಾವಣೆಯಲ್ಲಿಬಸವೇಶ್ವರ ಸಮಾಜ ಸೇವಾ ಬಳಗ ಹಾಗೂ ಕೆಎಚ್ಬಿ ಗೆಳೆಯರ ಬಳಗದ ವತಿಯಿಂದ ಸೋಮವಾರ ಸರಳವಾಗಿ ಜರುಗಿದ ಕೋಮು ಸಾಮರಸ್ಯ ಹಾಗೂ ಸಾಧಕರ ಸತ್ಕಾರ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

Contact Your\'s Advertisement; 9902492681

ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಸಂಜೀವ ಶೆಟ್ಟಿ ಮಾತನಾಡುತ್ತಾ, ನಾಲ್ವರು ಸಾಧಕರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೊತೆಗೆ ಸಮಾಜಕ್ಕೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜೊತೆಗೆ ಕೋಮು ಸಾಮರಸ್ಯ ಕಾಪಾಡಲು ಶ್ರಮಿಸಿರುವುದುಸಮಾಜಕ್ಕೆ ಮಾದರಿಯ ಕಾರ್ಯವಾಗಿದೆಯೆಂದರು.

ಕಾರ್ಯಕ್ರಮದಲ್ಲಿಸನ್ಮಾನಿತರಾದಮಹಮ್ಮದ್ಮಶಾಕ್, ರಸೀದಮಿಯಾತಂಬೂಲಿ, ದೌಲತಮಿಯಾ,  ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಸೋಮಶೇಖರಬಿ.ಮೂಲಗೆ, ಸಂಗಮೇಶ  ಸರಡಗಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಾನಂದಮಾನಿಂಗ, ಪ್ರಕಾಶ ಕುಲಕರ್ಣಿ, ಶಿವಕಾಂತಚಿಮ್ಮಾ, ಶಂಭುಲಿಂಗ ವಾಡಿ, ಬಸವರಾಜ ಹೆಳವರಯಾಳಗಿ,  ಶ್ರೀನಿವಾಸ ಬುಜ್ಜಿ, ಶಿವರಾಜಬಿರಬಿಟ್ಟೆ, ಅಣ್ಣಾರಾವಮಂಗಾಣೆ, ಅಶೋಕ ಪಾಟೀಲ, ದೇವೇಂದ್ರಪ್ಪಗಣಮುಖಿ, ಸೂರ್ಯಕಾಂತ ಸಾವಳಗಿ,  ಶಶಿಕಾಂತ ಪಾಟೀಲ, ಚಂದ್ರಕಾಂತ ಕಟಕೆ, ಖಂಡೇರಾವ ಕುಲಕರ್ಣಿ, ಶ್ರೀಶೈಲ ಪಾಟೀಲ, ವೀರಯ್ಯಹಿರೇಮಠ,ದಿಲೀಪ್ ಬಕರೆ, ದತ್ತಾತ್ರೇಯ ಸಾಬನಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here