ಕಲಬುರಗಿ: ತಾಲೂಕಿನ ನಂದೂರ ಬಿ. ಗ್ರಾಮದ ಬಾಪುನಾಯಕ ತಾಂಡದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಪ್ರಾಯೋಜಕತ್ವದಲ್ಲಿ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು. ತಾ.ಪಂ.ಸದಸ್ಯೆ ರೇಣುಕಾ ಎಸ್. ರಾಠೋಡ, ಬಿಜೆಪಿ ಮುಖಂಡರಾದ ಚಂದ್ರಶೇಖರ ಪಾಟೀಲ್, ಶಾಂತಕುಮಾರ ಪಾಟೀಲ್, ಮಂಜುನಾಥ ಬಿರಾದಾರ, ಶರಣಗೌಡ ಪಾಟೀಲ್, ಶಿವುಕುಮಾರ ಅಂಬಲಗಿ, ಶಂಕರ ರಾಠೋಡ ಇದ್ದರು.