ಕೂಲಿಕಾರ್ಮಿಕರಿಗೆ ಶುದ್ಧ ಕುಡಿಯುವ, ಮಾಸ್ಕ್, ಸ್ಯಾನಿಟೈಜರ್, ನೆರಳಿನ ವ್ಯವಸ್ಥೆ ಕಲ್ಪಿಸಲು ಕಟ್ಟಿಮನಿ ಮನವಿ

0
64

ಕಲಬುರಗಿ: ಮಹಾಮಾರಿ ಕರೋನಾದಿಂದಾಗಿ ಜನೆವರಿಯಲ್ಲಿ ಆರಂಭಗೊಳ್ಳಬೇಕಿದ್ದ ಕಾಮಗಾರಿಗಳು ತಡವಾಗಿ ಆರಂಭಗೊಂಡಿವೆ. ಎಲ್ಲಾ ಕೂಲಿಕಾರ್ಮಿಕರು ಸರ್ಕಾರವು ಗೊತ್ತು ಪಡಿಸಿದ ಅಳತೆ ಪ್ರಮಾಣದ ಕೆಲಸ ಬಹಳ ಅಚ್ಚು ಕಟ್ಟಾಗಿ ಮಾಡುತ್ತಿದ್ದಾರೆ. ಆದರೆ ಕೆಲಸ ನಡೆಯುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕೂಲಿಕಾರ್ಮಿಕರ ಮುಖಕ್ಕೆ ಮಾಸ್ಕಗಳಿಲ್ಲ ಅಲ್ಲದೇ ಊಟದ ಸಮಯದಲ್ಲಿ ಕೈಗೆ ಹಚ್ಚಿಕೊಳ್ಳಲು ಸ್ಯಾನಿಟೈಜರ್ ಇಲ್ಲ , ನೆರಳಿನ ವ್ಯವಸ್ಥೆ ಇಲ್ಲ, ಕೂಡಲೇ ಸರ್ಕಾರವು ಕೂಲಿ ಕಾರ್ಮಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಎಂ. ಕಟ್ಟಿಮನಿ ಅವರು ಸರಕಾರಕ್ಕೆ ಮನವಿ ಮಾಡಿದರು.

ಜಿಲ್ಲೆಯ ಅಫಜಲಪೂರ ತಾಲೂಕಿನ ಬಿದನೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಿದನೂರ, ಹಾವನೂರ, ಅವರಳ್ಳಿ, ಗೊಬ್ಬೂರ(ಕೆ) ಗ್ರಾಮಗಳು ಸೇರಿದಂತೆ ಇನ್ನಿತರರ ಗ್ರಾಮಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಬಿದನೂರ ಕೆರೆ ಮತ್ತು ಕೊಳ್ಳುರ ಪಕ್ಕದ ಕೆರೆಗಳಲ್ಲಿ ಸುಮಾರು 1000-1500 ಜನ ಕೂಲಿ ಕಾರ್ಮಿಕರು ಕೆರೆ ಹೂಳೆತ್ತುವ ಕಾಮಗಾರಿಯು ಮೂರು ನಾಲ್ಕು ವಾರಗಳಿಂದ ಆರಂಭಹೊಂಡಿರುವ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡುತ್ತಾ ಅವರು, ಎನ್‍ಎಮ್‍ಆರ್ ತೆಗೆಯುವಲ್ಲಿ 30-40 ಜನರ ಹೆಸರು ಕೈ ಬಿಟ್ಟಿದ್ದಾರೆ ಮತ್ತು ಮಾಡಿದ ಕೆಲಸದಲ್ಲಿ ಕೂಲಿಕಾರರ ಹಾಜರಿ ಕಡಿತ ಮಾಡುತ್ತಿದ್ದಾರೆ. ಇದರಿಂದ ದುಡಿದ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. 6-7 ಕಿ.ಮೀ. ದಿಂದ ದೂರ ಬಂದು ಕೆಲಸ ಮಾಡುವ ಕೂಲಿಕಾರರಿಗೆ ಪ್ರಯಾಣ ಭತ್ಯೆಯೂ ನೀಡುತ್ತಿಲ್ಲ ಎಂದರು.

Contact Your\'s Advertisement; 9902492681

ಕಳೆದ ಎರಡು ವರ್ಷಗಳ ಹಿಂದೆ ಕೆರೆ ಹೂಳೆತ್ತಿದ ಮಣ್ಣು ಹೊತ್ತು ಹಾಕಲು ಸುಮಾರು 5-6 ಟ್ಯಾಕ್ಟರ್‍ಗಳು ಬಳಸಲಾಗಿದೆ. ಆದರೆ ಇಲ್ಲಿಯವರಗೆ ಟ್ಯಾಕ್ಟರ್ ಕಿರಾಯಿ ಹಣ ಪಾವತಿ ಮಾಡಿಲ್ಲ. ಈ ವರ್ಷದ ಹೂಳೆತ್ತಿದ ಮಣ್ಣು ಎತ್ತು ಹಾಕಲು ಟ್ಯಾಕ್ಟರ್‍ಗಳು ಸಿಗದಂತಾಗಿದೆ. ಟ್ಯಾಕ್ಟರ್ ಕಳಿಸಲು ಅವರು ಒಪ್ಪುತ್ತಿಲ್ಲ. ಕಾರಣ ಈ ಎಲ್ಲ ಸಮಸ್ಯೆಗಳ ಇತ್ಯರ್ಥ ಕೂಡಲೇ ಆಗಬೇಕು ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮೋಹನ್ ಎಂ. ಕಟ್ಟಿಮನಿ, ಚಂದಪ್ಪ ಹಾವನೂರ, ಕೆಂಚಪ್ಪ ಕೋರಬಾ, ಯಲ್ಲಾಲಿಂಗ, ಮಲ್ಲಿಕಾರ್ಜುನ್ ಬಾಬುರಾವ, ನಾಗರಾಜ ಬಿದನೂರ, ಪೀರಪ್ಪ ಬಿದನೂರ, ಚಂದಮ್ಮ ಹಸರಗುಂಡಗಿ, ಸಿದ್ದಮ್ಮ ಮಲ್ಲಾಬಾದ, ವಿಠಾಬಾಯಿ ಹರಳಯ್ಯ, ರಮೇಶ ಹಾವನೂರ, ಹಯ್ಯಾಳಪ್ಪ, ಮಹೇಶ, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here