ವಿಶ್ವ ಪರಿಸರ ದಿನದ ಅಂಗವಾಗಿ ಎರಡು ಸಾವಿರ ಸಸಿ ನೆಡುವ ಗುರಿ

0
38

ಸುರಪುರ: ಈಬಾರಿಯ ವಿಶ್ವ ಪರಿಸರ ದಿನದ ಅಂಗವಾಗಿ ಸುಮಾರು ಎರಡು ಸಾವಿರ ಸಸಿಗಳನ್ನು ನೆಟ್ಟು ಬೆಳೆಸುವ ಸಂಕಲ್ಪವನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ,ತಾಲೂಕಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಹಲವಾರು ಕಾರ್ಯಗಳನ್ನು ಮಾಡುತ್ತಿದೆ.ಅದರಲ್ಲಿ ಪರಿಸರ ಬೆಳೆಸುವ ಕಾರ್ಯವು ಮುಖ್ಯವಾದುದಾಗಿದೆ ಎಂದರು.

Contact Your\'s Advertisement; 9902492681

ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ,ವೀರಶೈವ ಲಿಂಗಾಯತ ಯುವ ವೇದಿಕೆ ಈ ಮೊದಲಿನಿಂದಲು ಪರಿಸರ ಜಾಗೃತಿ ಮತ್ತು ಬೆಳೆಸುವತ್ತ ಗಮನ ಹರಿಸಿದೆ.ಮನುಷ್ಯನ ಬದುಕಿಗೆ ಶುದ್ಧವಾದ ಗಾಳಿ,ನೀರು ಮತ್ತು ಆಹಾರ ಬಹಳ ಮುಖ್ಯವಾಗಿದೆ.ಈ ಎಲ್ಲವು ದೊರೆಯಬೇಕಾದರೆ ಅದಕ್ಕೆ ಪರಿಸರದ ಬೆಳವಣಿಗೆಯೆ ಮುಖ್ಯವಾಗಿದೆ.ಆದ್ದರಿಂದ ಈ ಬಾರಿ ಸುಮಾರು ಎರಡು ಸಾವಿರ ಸಸಿಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ,ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಯಲಲಿತಾ ಪಾಟೀಲ್,ಜಗದೀಶ ಪಾಟೀಲ,ಮುಖಂಡರಾದ ವಿರೇಶ ನಿಷ್ಠಿ ದೇಶಮುಖ,ಬಸವರಾಜ ಬೂದಿಹಾಳ,ಮಂಜುನಾಥ ಗುಳಗಿ,ಪ್ರಕಾಶ ಅಂಗಡಿ,ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ,ತಾಲೂಕು ಅಧ್ಯಕ್ಷ ಚಂದ್ರಶೇಖರ ಡೊಣೂರ,ಶಿವರಾಜ ಕಲಕೇರಿ,ಮಲ್ಲಿಕಾರ್ಜುನ ಬಾದ್ಯಾಪುರ,ರವಿಕುಮಾರ ಹೆಮನೂರ,ಚಂದ್ರಶೇಖರ ಮಡಿವಾಳ ಸೇರಿದಂತೆ ಅನೇಕರಿದ್ದರು.

ಲಕ್ಷ್ಮೀಪುರ ಶ್ರೀಗಿರಿ ಮಠ: ತಾಲೂಕಿನ ದಕ್ಷಿಣ ಶ್ರೀಶೈಲ ಎಂದೆ ಖ್ಯಾತಿ ಪಡೆದ ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಬಳಿಯ ಶ್ರೀಗಿರಿ ಮಠದ ಆವರಣದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಹಾಪುರ ಬಿಲ್ವಂ ಮಠದ ಸ್ವಾ,ಮೀಜಿ,ನಾವದಗಿ ಹಿರೇಮಠದ ಸ್ವಾಮೀಜಿ,ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ,ಕರ್ನಾಟಕ ನವ ನಿರ್ಮಾಣ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶಿವರಾಜ ಕಲಕೇರಿ,ವಾಸುದೇವ ನಾಯಕ ಬೈರಿಮಡ್ಡಿ,ಆಕಾಶ ಕಟ್ಟಿಮನಿ,ಆನಂದ ಮಡ್ಡಿ,ದೇವು ನಾಯಕ,ವಿಶಾಲ್,ಗೂಳಪ್ಪ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here