ವಿವಿಧ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲು ಪತ್ರ ಚಳವಳಿ

0
126

ಸುರಪುರ: ಕಳೆದ ಅನೇಕ ವರ್ಷಗಳಿಂದ ಲಂಬಾಣಿ ಮತ್ತಿತರೆ ಮೂರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವಂತೆ ಹೋರಾಟ ಮಾಡುತ್ತಾ ಬರುತ್ತಿದ್ದು, ಸರಕಾರಗಳು ತಮ್ಮ ಓಟ್ ಬ್ಯಾಂಕ್‍ಗಾಗಿ ನಮ್ಮ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ ಎಂದು ದಲಿತ ಹೋರಾಟಗಾರ ಭೀಮು ಕರ್ನಾಳ ಬೇಸರ ವ್ಯಕ್ತಪಡಿಸಿದರು.

ನಗರದ ರಂಗಂಪೇಟೆಯ ಹಸನಾಪುರದಲ್ಲಿ ಐದು ನೂರಕ್ಕೂ ಹೆಚ್ಚು ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವ ಚಳವಳಿಯ ನೇತೃತ್ವ ವಹಸಿ ಮಾತನಾಡಿ,ಈಗ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಷ ಜಾತಿಗಳಾದ ಲಂಬಾಣಿ,ಬೋವಿ,ಕೊರಮ ಮತ್ತು ಕೊರಚ ಜಾತಿಗಳನ್ನು ಕೈ ಬಿಡುವಂತೆ ಆದೇಶ ಮಾಡಿದೆ.ಈಗಲಾದರು ಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೆ ಸುಪ್ರೀಂ ಕೋರ್ಟ್‍ನ ಆದೇಶದಂತೆ ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕೆಂದು ಇಂದು ಐದುನೂರಕ್ಕೂ ಹೆಚ್ಚು ಜನ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸುತ್ತೇವೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಅನೇಕರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಅರವಿಂದ ಬಿಲ್ಲವ,ಚಂದ್ರಶೇಖರ ತೇಲ್ಕರ್,ಶ್ರೀಮಂತ ಚಲುವಾದಿ, ಚಂದ್ರಪ್ಪ ಸಿಎಂಸಿ,ಹಣಮೇಶ ಬಿಲ್ಲವ್,ನಿಂಗರಾಜ ಬಡಿಗೇರ, ಅಶೋಕ ಬಿಲ್ಲವ್, ವಿನೋದ್ ಬಲ್ಲಿದವ್, ಮಾಣಿಕರಾವ್ ತೇಲ್ಕರ್,ಮಹೇಶ ತುಪ್ಪದ್, ಮಾನಪ್ಪ ಹೊಸಮನಿ, ವಾಸುದೇವ ಬಿಲ್ಲವ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here