ಪರಿಸರ ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ: ಶಾಸಕ ರಾಜುಗೌಡ

0
37

ಸುರಪುರ: ತಾಲೂಕು ಪಂಚಾಯತ,ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗು ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನವನ್ನು ನಗರದ ತಿಮ್ಮಾಪುರ ಸರಕಾರಿ ಆಸ್ಪತ್ರೆ ಆವರಣದಲ್ಲಿ ಆಚರಿಸಲಾಯಿತು.

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಚಾಲನೆ ನೀಡಿ ಮಾತನಾಡಿ,ಇಂದು ಪರಿಸರ ಕಾಳಜಿ ಎನ್ನುವುದು ಪ್ರತಿಯೊಬ್ಬರಲ್ಲಿ ಬರಬೇಕಿದೆ.ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.ದೇಹಲಿಯಂತಹ ನಗರದಲ್ಲಿ ಶುದ್ಧ ಗಾಳಿಯಿಲ್ಲದೆ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ಕಾರಣ ಪರಿಸರ ನಾಶವೆ ಮೂಲವಾಗಿದೆ. ಆದ್ದರಿಂದ ಪರಿಸರಕ್ಕೆ ಪ್ರಥಮಾದ್ಯತೆಯಾಗಬೇಕೆಂದರು.

Contact Your\'s Advertisement; 9902492681

ಅಲ್ಲದೆ ಇಂದು ಕೊರೊನಾ ವೈರಸ್ ಹಾವಳಿ ನಿತ್ಯವು ಹೆಚ್ಚುತ್ತದೆ.ಇದನ್ನು  ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ನಮ್ಮ ಸುರಪುರ ಕ್ಷೇತ್ರಕ್ಕೆ ಅಹಮದಾಬಾದ್‍ಗೆ ಹೋಗಿ ಬಂದ ಇಬ್ಬರಲ್ಲಿ ಬಿಟ್ಟರೆ ಇನ್ನುಳಿದಂತೆ ಎಲ್ಲರೂ ಬೇರೆ ರಾಜ್ಯದಿಂದ ಬಂದವರಲ್ಲಿಯೆ ಕಾಣಿಸಿಕೊಂಡಿದೆ.ಅವರನ್ನು ಕ್ವಾರಂಟೈನ್ ಮಾಡಿ ಆರೋಗ್ಯ ಮತ್ತು ತಾಲೂಕು ಆಡಳಿತ ಒಳ್ಳೆಯ ಕೆಲಸ ಮಾಡಿದೆ.ಈಗ ಬರುವವರಿಗೆ ಮನೆಯಲ್ಲಿ ಇರುವಂತೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ.ಗೃಹ ಬಂಧನಕ್ಕೊಳಗಾದವರು ಹೊರಗೆ ಬರದಂತೆ ಸ್ಥಳಿಯ ಗ್ರಾಮ ಪಂಚಾಯತಿ,ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಸದಸ್ಯರು ನಿಗಾವಹಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅನೇಕ ಜನ ರೈತರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು.ಅಲ್ಲದೆ ಅರಣ್ಯಾಧಿಕಾರಿ ಮೌಲಾಲಿ ಅವರು ಎಲ್ಲರಿಗೂ ಪರಿಸರ ರಕ್ಷಣೆ ಕುರಿತು ಪ್ರಮಾಣ ವಚನ ಬೋಧಿಸಿದರು.ನಂತರ ನಗರದ ತಾಲೂಕು ಪಂಚಾಯತಿ ಬಳಿಯ ಟ್ರೀ ಪಾರ್ಕ್‍ಗೆ ತೆರಳಿ ಸಸಿ ನೆಟ್ಟು ಟ್ರೀ ಪಾರ್ಕ್ ವೀಕ್ಷಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ್,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ,ಉಪ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಹಾಗು ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ) ಭೀಮಣ್ಣ ಬೇವಿನಾಳ,ದೊಡ್ಡ ದೇಸಾಯಿ,ನರಸಿಂಹಕಾಂತ ಪಂಚಾಮಗಿರಿ,ರಂಗನಗೌಡ ಪಾಟೀಲ,ಹರೀಶ ತ್ರಿವೇದಿ, ದೇವರಾಜ ಮಕಾಶಿ ಹಾಗು ನಗರಸಭೆ ಸದಸ್ಯೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here