ಬಸವೇಶ್ವರ ಮಹಾವಿದ್ಯಾಲಯದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಜನ್ಮ ದಿನಾಚರಣೆ

0
31

ಸುರಪುರ: ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರವರು ಕನ್ನಡ ಸಾಹಿತ್ಯದಪಾಲಿಗೆ ಅತೀ ಅಮುಲ್ಯವಾದ ಆಸ್ತಿಯಾಗಿದ್ದರು ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಕಾಲೇಜಿನ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಎಂಬ ಕಾವ್ಯಾ ನಾಮದ ಮೂಲಕ ಕನ್ನಡ ಸಾಹಿತ್ಯ ಲೋಕದ ಮನೆ ಮಾತಾದ ಮಾಸ್ತಿಯವರು ಸಣ್ಣ ಕಥೆಗಳು, ಕಾವ್ಯ ಸಂಕಲನಗಳು, ಜೀವನ ಚರಿತ್ರೆ, ನಾಟಕ ಪ್ರಬಂಧ ರಚಿಸಿದ್ದಾರೆ. ಜೂನ್-6-1891 ರಂದು ಕೋಲಾರದ ಮಾಲೂರಿನಲ್ಲಿ ಜನಿಸಿದ ಇವರು ಸರಕಾರದಲ್ಲಿ ಅಸಿಸ್ಟೆಂಟ್ ಕಮಿಶನರ್ ಆಗಿ ವೃತ್ತಿ ಜೀವನ ಆರಂಭಿಸಿದರು ಇವರ ಚಿಕ್ಕವಿರ ರಾಜೇಂದ್ರ ಕಾಧÀಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸಣ್ಣ ಕಥೆಗಳನ್ನು 5 ಸಂಪುಟಗಳಲ್ಲಿ ಬರೆದ ಇವರು ಅನೇಕ ನಾಟಕ, ಜೀವನ ಚರಿತ್ರೆ, ಪ್ರಬಂಧಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ವಿರೇಶ ಹಳೀಮನಿ, ಪ್ರಮುಖರಾದ ಕರ್ನಾಟಕ ನವ ನಿರ್ಮಾಣ ವೇದಿಕೆಯ ವಿಭಾಗಿಯ ಅಧ್ಯಕ್ಷ ಶಿವರಾಜ ಕಲೀಕೆರಿ, ಬಸವರಾಜ ಚನ್ನಪಟ್ನ, ಮೌನೇಶ ಐನಾಪೂರ, ಆನಂದ ಕುಂಬಾರ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here