ಕಲಬುರಗಿ: ವಕೀಲರ ಸಂಘದ ವತಿಯಿಂದ 1000 ನ್ಯಾಯವಾದಿಗಳಿಗೆ ಆಹಾರ ಕಿಟ್ ವಿತರಣೆ ಅಭಿಯಾನಕ್ಕೆ ಇಂದು ಜಿಲ್ಲಾಧಿಕಾರಿ ಶರತ್ ಬಿ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಚಾಲನೆ ನೀಡಿದರು.
ಕೊರೊನಾ ಮಹಾಮಾರಿಯಿಂದ ಕಷ್ಟ ಕಾಲದಲ್ಲಿ ಬಳಲುತ್ತಿರುವ ಬೇರೆ ಬೇರೆ ಸಮುದಾಯಕ್ಕೆ ನೀಡಿದ ಪ್ರಯುಕ್ತ ಅದೇ ರೀತಿ ದಿನ ನಿತ್ಯ ನ್ಯಾಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯುವ ವಕೀಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ಸರಕಾರದಿಂದ ಈ ಒಂದು ಕಾರ್ಯ ಮಾಡಲು ಸಂಘದ ಪರವಾಗಿ ವಿನಂತಿ ಮೇರೆಗೆ, ಈ. ಸೇವಾ ಕಾರ್ಯ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಕಳೆದ 3 ತಿಂಗಳ ಕಾಲ coved-19, ನಿಂದ Court ಕಲಾಪಕ್ಕೆ ರಜೆ ಘೋಷಣೆ ಯಾಗಿತ್ತು, ಕಾರಣ ಬಡ ವಕೀಲರಿಗೆ ದಿನಸಿ ಆಹಾರ ಕಿಟ್ ನೀಡುವ ಮೂಲಕ ಸ್ಥಳೀಯ ಸಂಘದ ಅಧ್ಯಕ್ಷರಾದ ಅರುಣ ಕಿಣ್ಣಿ ಅವರ ಉಪಸ್ಥಿತಿಯಲ್ಲಿ 1000 ವಕೀಲರಿಗೆ ಧಾನ್ಯ ವಿತರಸಿಸುವುದಾಗಿದ್ದು, ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 5 ಜನರಿಗೆ ಡಿಸಿ ಶರತ್ ಬಿ ಮತ್ತು ಶಾಸಕ ದತ್ತಾತ್ರೇಯ ಪಾಟೀಲ(ಅಪ್ಪು ಗೌಡ) ನ್ಯಾಯವಾದಿಗಳಿಗೆ ಆಹಾರ ಕಿಟ್ ಹಂಚಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಸದಸ್ಯ ಮೊಟಕಪಲ್ಲಿ ಕಾಶಿನಾಥ್, ಸಂಘ ದ ಉಪಾಧ್ಯಕ್ಷ ರಾಜಶೇಖರ್ ಡೊಂಗರ ಗೌವ್, ಕಾರ್ಯದರ್ಶಿ ಶರಣು ಪಾಸ್ತಾಪುರ್, ಸಹ ಕಾರ್ಯದರ್ಶಿ ಶಿವಾನಂದ್ ಹಿ, ಖಜಾಂಚಿ ಸಂತೋಷ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.