ಆರಾಧ್ಯ ದೇವ ಶ್ರೀ ಶರಣಬಸವೇಶ್ವರರ ದರ್ಶನ ಪಡೆದ ಭಕ್ತ ವೃಂದ

0
81

ಕಲಬುರಗಿ: ಕೋವಿಡ್-19 ರೋಗದಿಂದಾಗಿ ಮೂರು ತಿಂಗಳುಗÀಳ ಕಾಲ ಮುಚ್ಚಲ್ಪಟ್ಟಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನದ ದ್ವಾರಬಾಗಿಲು, ಸೋಮವಾರ ತೆರೆಯಲ್ಪಟ್ಟ ಕಾರಣ ಸಾವಿರಾರು ಭಕ್ತರು ಶ್ರೀ ಶರಣಬಸವೇಶ್ವರ ಮಾಹಾರಾಜಕೀ ಜೈ ಎಂಬ ಜಯ ಘೋಷದೊಂದಿಗೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.
ಕಲಬುರಗಿಯ ಆರಾಧ್ಯ ದೇವರಾದ ಶ್ರೀ ಶರಣಬಸವೇಶ್ವರರ ದರ್ಶನ ಪಡೆಯಲೆಂದು ಸಾವಿರಾರು ಭಕ್ತರು ಬೆಳಗಿನ ಜಾವ 5 ಗಂಟೆಗೆ ದೇವಸ್ಥಾನÀಕ್ಕೆ ಆಗಮಿಸಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡರು. ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ ಒಡೆಯುವುದು ಮತ್ತು ಅಭಿಷೇಕ, ಪ್ರಸಾದ ನಿಲ್ಲಿಸಲಾಗಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ದೇವರ ದರ್ಶನ ಬೆಳಗ್ಗೆ 7ಗಂಟೆಯಿಂದ ಪ್ರಾರಂಭಗೊಂಡಿತ್ತು. 7ಗಂಟೆಗೆ ಪ್ರಪ್ರಥಮವಾಗಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ದೇವರ ದರ್ಶನ ಪಡೆದರು. ತದನಂತರ ಭಕ್ತಾದಿಗಳು ಸರದಿ ರೀತಿಯಲ್ಲಿ ಒಬ್ಬೊಬ್ಬರಾಗಿ ದರ್ಶನ ಪಡೆಯಲು ಆಗಮಿಸಿದರು.

Contact Your\'s Advertisement; 9902492681

ದೇವಸ್ಥಾನದ ಆವರಣಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾನದ ಅಧಿಕಾರಿಗಳು ಮತ್ತು ಸಿಬಂದ್ದಿವರ್ಗ ಭಕ್ತಾದಿಗಳ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿದರು. ಅದಾದ ನಂತರ ಕೊವೀಡ್-19 ಸೊಂಕು ನಿವಾರಕ ಯಂತ್ರದ ಮುಖಾಂತರ ದೇವಸ್ಥಾನದ ಮುಖ್ಯದ್ವಾರಕ್ಕೆ ಆಗಮಿಸಬೇಕು. ದೇವರ ದರ್ಶನ ಪಡೆಯುವ ಸ್ಥಳದಲ್ಲಿಯೂ ಮತ್ತೆ ಸ್ಯಾನಿಟೈಸರ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಭಕ್ತಾದಿಗಳು ಆಗಮಿಸುವ ಮಾರ್ಗದಲ್ಲಿ ಸೈನಿಟೈಸರ್ ಒಳಗೊಂಡ ಕಾಲು ವರೆಸುವ ಚಾಪೆಗಳನ್ನು ಇಡಲಾಗಿದೆ. ಭಕ್ತಾದಿಗಳು ಅದರ ಮೇಲೆ ಕಾಲು ಒರೆಸಿಕೊಂಡು ದೇವರ ದರ್ಶನ ಪಡೆಯಲು ಸಾಗಬೇಕು. ಪ್ರತಿ ಅರ್ಧ ಗಂಟೆಕೊಮ್ಮೆ ಕಾಲು ಒರೆಸುವ ಚಾಪೆಗೆ ಸೈನಿಟೈಸರ್ ಸಿಂಪಡಿಸಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ದೇಶನದಂತೆ ಈ ಮಾರಕ ರೋಗ ಭಕ್ತರಿಗೆ ಹರಡದಂತೆ ಮುಂಜಾಗೃತ ಕ್ರಮವಾಗಿ ದೇವಸ್ಥಾನದ ಆವರಣದಲ್ಲಿ ಇನ್ನಿತರ ಜಾಗೃತ ಕಾರ್ಯ ಕೈಗೊಳ್ಳಲಾಗಿದೆ. ಈ ಕುರಿತು ಭಕ್ತಾದಿಗಳು ದೇವಸ್ಥಾನದ ಅಧಿಕಾರಿಗಳಿಗೆ ಮತ್ತು ಸಿಬಂದ್ದಿವರ್ಗಕ್ಕೆ ಸಹಕರಿಸಿದ್ದು ಸಂತೋಷದಾಯಕವಾಗಿದೆ ಎಂದು ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಹೇಳಿದರು. ಶರಣಬಸವ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಕುಲಸಚಿವ ಡಾ.ಅನೀಲಕುಮಾರ ಬಿಡವೆ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಕೈಗೊಳ್ಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here