ಜೇವರ್ಗಿಯಲ್ಲಿ ಬಿರುಗಾಳಿ ಸಹಿತ ಮಳೆ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

0
120

ಜೇವರ್ಗಿ: ಭೀಕರ ಬಿರುಗಾಳಿಗೆ ಮನೆಯ ಮೇಲಿದ್ದ ನೀರು ಶೇಖರಿಸುವ ಸಿಂಟೆಕ್ಸ್ ಟ್ಯಾಂಕೊಂದು ರಸ್ತೆಯ ಮೇಲೆ ಸಂಚರಿಸುವ ಬೈಕ್ ಸವಾರನಿಗೆ ಅಪ್ಪಳಿಸಿದ ಘಟನೆ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಜರುಗಿದೆ.

ಮಂಗಳವಾರ ಸಂಜೆ ಪಟ್ಟಣದಲ್ಲಿ ಭೀಕರ ಬಿರುಗಾಳಿ ಬೀಸತೊಡಗಿದೆ. ಬಿರುಗಾಳಿ ಸಹಿತ ಮಳೆಯಾಗುತಿದ್ದುˌ ಜನಜೀವನ ಅಸ್ತವ್ಶಸ್ತವಾಗಿದೆ. ಮನೆಯ ಮಾಳಿಗೆಯ ಮೇಲಿದ್ದ ಸಿಂಟೆಕ್ಸ್ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಬೈಕ್ ಸವಾರನಿಗೆ ಅಪ್ಪಳಿಸಿದ್ದುˌ ಬೈಕ್ ಸವಾರ ಸ್ಥಳದಲ್ಲೇ ಬಿದ್ದಿದ್ದಾನೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here