ಪ್ರೊ.ಬಿ.ಕೃಷ್ಣಪ್ಪನವರು!

0
89

ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ತತ್ವಾದರ್ಶಗಳು ಮತ್ತು ಚಿಂತನೆಗಳ ಬೆಳಕಿನಿಂದ ಕರ್ನಾಟಕದಲ್ಲಿ ಸಾಮಾಜಿಕ ಪರಿವರ್ತನೆ ತರಲು ಅತೀವ ಪರ್ಯಾಯವಾಗಿ ಹೋರಾಡಿದ ಮಾನವತಾವಾದಿ ಪ್ರೊ.ಬಿ.ಕೃಷ್ಣಪ್ಪನವರು ಬೆಂದು ಬಸವಳಿಯುತ್ತಿರುವ ಜನ ಸಮೂಹದೊಂದಿಗೆ ಸಮೀಕರಿಸಿಕೊಂಡು ಶೋಷಕ ವರ್ಗದ ಆಳ ಆಂತರ್ಯಗಳನ್ನು ಬಯಲು ಮಾಡುವ,ಶೋಷಿತ ವರ್ಗ ಅದನ್ನು ಮೆಟ್ಟಿನಿಲ್ಲುವ ಅರಿವು ಮತ್ತು ಸ್ಥೈರ್ಯ ನೀಡುವ, ಸಮಾಜ ಮತ್ತು ಪ್ರಭುತ್ವ ಅದರ ನಿವಾರಣಾ ಕ್ರಮಕ್ಕೆ ಸಜ್ಜಾಗುವ ಮಾನವೀಯ ಹೋರಾಹೋರಾಟವನ್ನು 70ರ ದಶಕದಲ್ಲಿ ಪ್ರಾರಂಭಿಸಿದರು.

ಬಾಬಾಸಾಹೇಬರ ಅರಿವಿನ ಬೆಳಕಿನಲ್ಲಿ ಮುನ್ನಡೆದರು.ಆ ಬೆಳಕಿನ ಹಣತೆಯನ್ನು ಹಚ್ಚಿಟ್ಟರು.”ಬಡವರ ಮನೆಯಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ ಆ ಬೆಳಕನ್ನು ಎಂದೂ ಆರದಂತೆ ಕಾಪಾಡಿ” ಎಂದು ಒಡನಾಡಿಗಳಿಗೆ ಕರೆಯಿತ್ತರು.

Contact Your\'s Advertisement; 9902492681

ಕರ್ನಾಟಕ ದಲಿತ ಸಂಘರ್ಷ ಸಮಿತಿಯೆಂಬ ಸ್ವಾಭಿಮಾನಿ ಚಳುವಳಿ ಕಟ್ಟುವ ಮುಖಾಂತರ ಕರ್ನಾಟಕದಲ್ಲಿ ಶೋಷಿತರು,ಧಮನಿತರನ್ನು ನಾಡಿನ ಮುಖ್ಯವಾಹಿನಿಗೆ ಕರೆತಂದರು. ಭೂಮಿ, ವಸತಿ, ಆಹಾರ, ಶಿಕ್ಷಣ, ಶೋಷಣೆ, ಕೊಲೆ, ದೌರ್ಜನ್ಯ ಮುಂತಾದ ಅವರ ಮಾನವೀಯ ಹೋರಾಟ 70ರ ದಶಕದಲ್ಲಿ ಬಹು ದೊಡ್ಡ ಪರಿಣಾಮ ಬೀರಿತು. ಬ್ರಾಹ್ಮಣ್ಯ ಮತ್ತು ಬಂಡವಾಳ ಸಂಸ್ಕೃತಿಗೆ ಪೆಟ್ಟು ನೀಡಿತು.

ಈ ದಿನ ಎಲ್ಲಾ ತಳಸಮುದಾಯಗಳು ಧ್ವನಿ ಎತ್ತುತ್ತಿವೆ, ಹೋರಾಟಕ್ಕೆ ಇಳಿದಿವೆ ಅಂದರೆ ಅದರ ಮೂಲ ಬೇರು ದ.ಸಂ.ಸ ದ(DSS) ಚಿಂತನೆ ಎಂಬುದನ್ನು ಗಮನಿಸಬೇಕಾಗಿದೆ. ಅವರ ಬರಹ,ಭಾಷಣ,ಗಾಯನ ನಾಟಕ,ಚರ್ಚೆ ಸಂವಾದ, ವೈಚಾರಿಕ ಚಿಂತನೆ ಪ್ರಾಮಾಣಿಕ, ಪಾರದರ್ಶಕ ಶಿಸ್ತಿನ ಬದುಕು ಸಾಹಿತ್ಯ ಭೂ ಹೋರಾಟ ದಲಿತ ಚಳವಳಿಯಲ್ಲಿ(ಕರ್ನಾಟಕ ದಲ್ಲಿ) ಅಚ್ಚಳಿಯದೆ ಉಳಿದಿದೆ. ಹೀಗೆ ಒಬ್ಬ ಆದರ್ಶ ನಾಯಕರಾಗಿದ್ದ ನಮಗೆ, ಅವರ ನಡೆದ ಹಾದಿಯಲ್ಲಿ ನಾವು ನಡೆಯೋಣ.70ರ ದಶಕದ ಚಳುವಳಿಯನ್ನ ಮತ್ತೆ ಕಟ್ಟೋಣ.

ತಮಗೆಲ್ಲರಿಗೂ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪನವರ ಜಯಂತಿಯ ಶುಭಾಶಯಗಳು.

– ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
ಹೊಸಕೋಟೆ ತಾಲೂಕು ಸಮಿತಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here