ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರಾಂತ ರೈತ ಕೂಲಿಕಾರರ ಸಂಘ ಪ್ರತಿಭಟನೆ

0
26

ಸುರಪುರ: ದೇಶದಲ್ಲಿ ಜಾರಿಗೊಳಿಸುತ್ತಿರುವ ಎಪಿಎಂಸಿ ಕಾಯ್ದೆ ತಿದ್ದಪುಡಿ ಹಾಗು ವಿದ್ಯೂತ್ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ ಜಾರಿ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಮುಖಂಡರು ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಈಗಾಗಲೆ ದೇಶದಲ್ಲಿನ ರೈತರು ಸತತ ಬರಗಾಲ,ನೆರೆ ಹಾವಳಿಯಿಂದ ಸಂಪೂರ್ಣ ನಷ್ಟಗೊಂಡಿದ್ದಾರೆ.ಅಲ್ಲದೆ ದೇಶದಲ್ಲಿನ ಕೊರೊನಾ ವೈರಸ್ ಹಾವಳಿಯಿಂದ ಲಕ್ಷಾಂತರ ಜನ ರೋಗಕ್ಕೆ ತುತ್ತಾಗಿದ್ದಾರೆ.ಇಡೀ ದೇಶವೆ ತೀವ್ರ ಸಂಕಷ್ಟದಲ್ಲಿದೆ.ಇಂತಹ ಸಂದರ್ಭದಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯಲು ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ದೇಶದ ರೈತರನ್ನು ಸರ್ವನಾಶ ಮಾಡಲು ಹೊರಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಸರಕಾರ ಕೂಡಲೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಮಾತನಾಡಿ,ಸರಕಾರ ಕೊರೊನಾ ದಿಂದ ತೊಂದರೆಗೊಳಗಾದ ಜನರ ನೆರವಿಗೆ ನಿಲ್ಲುವ ಬದಲು ಎಪಿಎಂಸಿ ಕಾಯ್ದೆ,ವಿದ್ಯೂತ್ ಕಾಯ್ದೆ ಅಗತ್ಯ ವಸ್ತುಗಳ ಕಾಯ್ದೆ ಜಾರಿಗೊಳಿಸುವ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೆ ದೂಡಲು ನಿಂತಿದೆ.ಇದನ್ನು ಸರಕಾರ ಕೈ ಬಿಡಬೇಕೆಂದು ಇಂದು ರಾಷ್ಟ್ರಾದ್ಯಂತ ಹೋರಾಟ ನಡೆಸಿ ಸರಕಾರಕ್ಕೆ ಎಚ್ಚರಿಸಲಾಗುತ್ತಿದೆ ಎಂದರು.ಸರಕಾರ ಗ್ರಾಮೀಣ ಭಾಗದ ಎಲ್ಲಾ ಕಸಬುದಾರರಿಗೆ ಪರಿಹಾರ ಧನ ನೀಡಬೇಕು.ರೈತರ ಮತ್ತು ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಎಲ್ಲ ರೈತರಿಗೂ ಸಾಲ ನೀಡಬೇಕು ಹಾಗೂ ಎಲ್ಲಾ ಕುಟುಂಬಗಳಿಗೆ ತಲಾ ವ್ಯಕ್ತಿಗೆ ೧೫ ಕೆ.ಜಿಯಂತೆ ಪಡಿತರ ಧಾನ್ಯಗಳ ನೀಡಬೇಕೆಂದು ಆಗ್ರಹಸಿದರು.

ಇದಕ್ಕು ಮುನ್ನ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೇಂದ್ರ ಸರಕಾರ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆಯ ತಿದ್ದಪಡಿ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ನಂತರ ತಹಸೀಲ್ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ,ಡಿಹೆಚ್‌ಎಸ್ ಅಧ್ಯಕ್ಷ ಪ್ರಕಾಶ ಆಲ್ಹಾಳ,ರಾಜು ದೊಡ್ಮನಿ,ಖಾಜಾಸಾಬ್ ದಳಪತಿ,ರಫೀಕ ಸುರಪುರ,ಕೃಷ್ಣಾ ನಾಯಕ,ಬಸವರಾಜ ಐಕೂರ,ನಬಿರಸೂಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here