ಕರವೇ ರಾಜ್ಯಾಧ್ಯಕ್ಷರ ಜನ್ಮ ದಿನದ ಅಂಗವಾಗಿ ವಲಸೆ ಕಾರ್ಮಿಕರಿಗೆ ಆಹಾರ ವಿತರಣೆ

0
54

ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ೫೪ನೇ ಹುಟ್ಟು ಹಬ್ಬದ ಅಂಗವಾಗಿ ಸುರಪುರ ತಾಲೂಕು ಘಟಕದಿಂದ ನೆರೆ ರಾಜ್ಯದಿಂದ ಬಂದು ಕ್ವಾರಂಟೈನಲ್ಲಿರುವ ವಲಸೆ ಕಾರ್ಮಿಕರಿಗೆ ಆಹಾರ ವಿತರಿಸುವ ಮೂಲಕ ಆಚರಿಸಿದರು.

ಇದಕ್ಕು ಮುನ್ನ ನಡೆದ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಭಾಗವಹಿಸಿ ಎಲ್ಲರಿಗೂ ಸಿಹಿ ಹಂಚಿ ಮಾತನಾಡಿ,ಕನ್ನಡ ನಾಡು ನುಡಿ ಗಡಿಯ ವಿಷಯ ಬಂದರೆ ಮೊದಲು ಸಿಂಹ ಘರ್ಜನೆ ಮೊಳಗಿಸುವ ಸಂಘಟನೆ ಮತ್ತು ನಾಯಕರೆಂದರೆ ಅದು ಟಿ.ಎ.ನಾರಾಯಣಗೌಡ ಅವರು.ಅವರಿಂದ ಇಂದು ನಾಡಿನಲ್ಲಿ ಅರವತ್ತು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಕನ್ನಡ ದೀಕ್ಷೆಯ ಮೂಲಕ ನಾಡು ನುಡಿಯ ಸೇವೆಗೆ ಮುಂದಾಗಿದ್ದಾರೆ.ಅಂತಹ ಕನ್ನಡದ ಭೀಷ್ಮ ನಾರಾಯಣಗೌಡರ ಜನ್ಮ ದಿನ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ತಾಲೂಕು ಅಧ್ಯಕ್ಷ ವೆಂಕಟೇಶ ಬೈರಿಮರಡಿ ಮಾತನಾಡಿ,ಸುರಪುರ ತಾಲೂಕು ಘಟಕ ಕಳೆದ ಒಂದುವರೆ ದಶಕದಿಂದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಹಾಗು ಬಸವರಾಜ ಪಡಕೋಟೆಯವರ ಮಾರ್ಗದರ್ಶನದಲ್ಲಿ ಅನೇಕ ಜನಪರವಾದ ಕಾರ್ಯಗಳನ್ನು ಮತ್ತು ಹೋರಾಟಗಳನ್ನು ಮಾಡುತ್ತಾ ಬಂದಿದೆ.ಅದರ ಮುಂದುವರೆದ ಭಾಗವಾಗಿ ಇಂದು ನಮ್ಮ ನಾಯಕರ ಹುಟ್ಟು ಹಬ್ಬದ ಅಂಗವಾಗಿ ನಗರದ ದಿಗ್ಬಂಧನ ಕೇಂದ್ರಗಳಲ್ಲಿನ ಎಲ್ಲಾ ಕಾರ್ಮಿಕರಿಗೆ ಆಹಾರ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ ಎಂದರು.

ನಂತರ ಮುರಾರ್ಜಿ ದೇಸಾಯಿ ವಸತಿ ಶಾಲೆ,ಬಾಲಕಿಯರ ವಸತಿ ನಿಲಯ ಹಾಗು ಬಾಲಕರ ವಸತಿ ನಿಲಯದಲ್ಲಿನ ಎಲ್ಲಾ ಕಾರ್ಮಿಕರಿಗೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಸಮ್ಮುಖದಲ್ಲಿ ಆಹಾರ ವಿತರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ ಪದಾಧಿಕಾರಿಗಳಾದ ಶಿವಮೋನಯ್ಯ ನಾಯಕ ದೇವರಗೋನಾಲ,ಅಂಬ್ಲಯ್ಯ ಬೇಟೆಗಾರ,ಹಣಮಗೌಡ ಶಖಾಪುರ,ಶ್ರೀನಿವಾಸ ಬೈರಿಮರಡಿ,ಆನಂದ ಮಾಚಗುಂಡಾಳ,ಶ್ರೀನಿವಾಸ ಲಕ್ಷ್ಮೀಪುರ,ಹಣಮಂತ ಹಾಲಗೇರಾ,ಪ್ರಕಾಶ ಹೆಗ್ಗಣದೊಡ್ಡಿ.ಶ್ರವಣಕುಮಾರ ಡೊಣ್ಣಿಗೇರಾ,ಅನಿಲ ಬಿರಾದಾರ್,ಶ್ರೀಶೈಲ ಕಾಚಾಪುರ,ಭಾಷಾ ಪರಸನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here