ಪರಿಶಿಷ್ಟ ಜಾತಿಯಿಂದ ಭೋವಿ ಸಮಾಜವನ್ನು ಕೈಬಿಡದಂತೆ ಪತ್ರ ಚಳುವಳಿ

0
114

ಶಹಾಬಾದ: ಭೋವಿ ಸಮುದಾಯಗಳನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಬುಧವಾರ ಭೋವಿ ವಡ್ಡರ್ ಸಮಾಜ ಸೇವಾ ಸಂಘ ಹಾಗೂ ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿಯ ಮುಖಂಡರು ಪತ್ರ ಚಳುವಳಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಭೋವಿ ವಡ್ಡರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಭೀಮರಾವ ಸಾಳುಂಕೆ, ಭೋವಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಕೆಲ ಪಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿವೆ.ಅವರ ಈ ಕ್ರಮ ಖಂಡನೀಯವಾಗಿದೆ. ರಾಜ್ಯದಲ್ಲಿ ನಮ್ಮ ಸಮುದಾಯದ ಜನರು ತೀರ ಸಂಕಷ್ಟ ಸ್ಥಿತಿಯಲ್ಲಿದ್ದಾರೆ.ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿಯೂ ಹಿಂದುಳಿದಿರುವ ಈ ಸಮುದಾಯವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬಾರದು ಎಂದು ಭೋವಿ ಸಮಾಜದ ಮುಖಂಡರು ಸರ್ಕಾರಕ್ಕೆ ಪತ್ರಗಳನ್ನು ಬರೆದು ಅಂಚೆ ಮೂಲಕ ಮನವಿ ಪತ್ರ ಸಲ್ಲಿಸಿದರು.

ಭೋವಿ ವಡ್ಡರ್ ಸಮಾಜ ಸೇವಾ ಸಂಘದ ಮುಖಂಡರಾದ ಅನೀಲ ಭೋರಗಾಂವಕರ್,ರಾಮು ಕುಸಾಳೆ,ದೇವದಾಸ ಜಾಧವ,ದೀಪಕ ಚೌಧರಿ,ಅಂಬಣ್ಣ ಕುನ್ನೂರಕರ್,ಸಿದ್ರಾಮ ಕುಸಾಳೆ, ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಕಳೊಳ್ಳೊ ಕುಸಾಳೆ, ರಾಜು ದಂಡಗುಲಕರ್,ಅಂಬಾದಾಸ ಗುರೂಜಿ, ತಿರುಪತಿ ಚೌಧರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here