ಕೊರೋನಾ ಸೋಂಕಿನಿಂದ 66 ಜನರು ಗುಣಮುಖ

0
26

ಕಲಬುರಗಿ: ಜಿಲ್ಲೆಯ ಒಟ್ಟು 66 ಜನ ಕೊರೋನಾ ಪೀಡಿತರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬುಧವಾರ ಕಲಬುರಗಿ ಕೋವಿಡ್-19 ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ನಗರದ 02, ಕಲಬುರಗಿ ತಾಲೂಕಿನ 02, ಚಿತ್ತಾಪುರ ತಾಲೂಕಿನ 29, ಕಾಳಗಿ ತಾಲೂಕಿನ 04, ಸೇಡಂ ತಾಲೂಕಿನ 13, ಚಿಂಚೋಳಿ ತಾಲೂಕಿನ 04, ಆಳಂದ ತಾಲೂಕಿನ 10, ಅಫಜಲಪುರ ಮತ್ತು ಕಮಲಾಪುರ ತಾಲೂಕಿನ ತಲಾ ಓರ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 780 ಜನರಲ್ಲಿ 279 ಜನ ಗುಣಮುಖರಾಗಿದ್ದಾರೆ. ಉಳಿದಂತೆ 493 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here