ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಣೆ

0
20

ಶಹಾಬಾದ: ಸರ್ಕಾರ ರೈತರಿಗಾಗಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುತ್ತಿದೆ. ನಗರದ ನಾನಾ ಅಂಗಡಿಗಳಲ್ಲಿ ಕಳಪೆ ಬೀಜ ಖರಿದಿಸದೇ ಸರ್ಕಾರದಿಂದ ನಿಗದಿ ಮಾಡಿರುವ ಸಬ್ಸಿಡಿ ರೂಪದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿ ಮಾಡುವುದರ ಮೂಲಕ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ಸೇಡಂ ಉಪ ಕೃಷಿ ನಿರ್ದೆಶಕ ಬಾಲರಾಜ ರಂಗರಾವ ಹೇಳಿದರು.

ಅವರು ರೈತ ಸಂಪರ್ಕ ಕೇಂದ್ರದ ವತಿಯಿಂದ ಭಂಕೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆಯೋಜಿಸಲಾದ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ತಲೆಮಾರಿನಿಂದ ಕೃಷಿಯನ್ನೇ ಜೀವನದ ಆಧಾರವಾಗಿಸಿಕೊಂಡು ಬದುಕುತ್ತಿರುವ ರೈತರಿಗೆ, ಆಧುನಿಕ ಕೃಷಿ ಬಗ್ಗೆ ಮಾಹಿತಿ ತಿಳಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಾಗಿದೆ. ದೇಶದ ಬೆನ್ನೆಲುಬಾದ ರೈತ ಹಳೆ ಕಾಲದ ಕೃಷಿ ಪದ್ಧತಿಗಳನ್ನು ಹಾಗೂ ಅವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ಸರಿಯಾದ ಬೆಳೆಯ ನಿರ್ವಹಣೆಯಾಗದೇ ಇಳುವರಿ ಕುಂಠಿತವಾಗಿ ತೊಂದರೆಗೆ ಈಡಾಗುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಇಂತಹ ಜಾಥಾ ಮೂಲಕ, ಸಂಚಾರಿ ವಾಹನದ ಮೂಲಕ ಮಾಹಿತಿ ನೀಡುವುದರ ಜೊತೆಗೆ ಗ್ರಾಮಕ್ಕೆ ಬೇಟಿ ನೀಡಿ ಅವರಿಗೆ ಸಮಯ ಕೊಟ್ಟು ಸರಿಯಾದ ಮಾಹಿತಿ ನೀಡಿದರೆ ದೇಶದ ಅನ್ನದಾತನ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಚಿತ್ತಾಪೂರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕಾಶಿನಾಥ ದಂಡೋತಿ, ಸಹಾಯಕ ಕೃಷಿ ಅಧಿಕಾರಿ ಶಶಿಕಾಂತ ಭರಣಿ, ರವೀಂದ್ರಕುಮಾರ ಇತರರು ಇದ್ದರು.ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here