ಇಷ್ಟಲಿಂಗ ಅರುಹಿನ ಕುರುಹಲ್ಲದೆ ಸಮಾನತೆಯ ಪ್ರತೀಕ

0
134

ಕಲಬುರಗಿ: ಹಡಪದ ಲಿಂಗಮ್ಮ ಇಷ್ಟಲಿಂಗಕ್ಕೆ ’ಮಹಾಘನ’ ಎಂದು ಹೇಳುತ್ತಾಳೆ. ತನ್ನ ದಿನಚರಿಯನ್ನುಒಂದು ವಚನದಲ್ಲಿ ಹೇಳುತ್ತಾ ಲಿಂಗದಲ್ಲಿ ನಡೆದು, ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ಮುಟ್ಟಿ, ಲಿಂಗದಲ್ಲಿ ವಾಸಿಸಿ, ಲಿಂಗದಲ್ಲಿಯೇ ಕೇಳಿ ಲಿಂಗವಾಗಿ ನೋಡಿ, ಸರ್ವಾಂಗವೂ ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲಿಯೇ ಐಕ್ಯಕಂಡೆಯಾ ಅಪ್ಪಣ್ಣ ಪ್ರಿಯಚನ್ನಬಸವಣ್ಣ ಎಂದು ಹೇಳಿ ತನ್ನ ಲಿಂಗನಿಷ್ಠೆಯನ್ನು ಮೆರೆಯುತ್ತಾಳೆ.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಿಜಸುಖಿ ಶರಣ ಹಡಪದ ಅಪ್ಪಣ್ಣ ಸಮಾಜ ಹಾಗೂ ಡಾ. ಎಸ್. ಆರ್.ಗುಂಜಾಳರವರು ಬಸವ ತತ್ತ್ವ ಪ್ರಚಾರಾರ್ಥ ಏರ್ಪಡಿಸಿದ್ದ ಆನ್‌ಲೈನ್‌ಅರಿವಿನ ಮನೆಯ ೬೩೧ ನೆಯದತ್ತಿಕಾರ್ಯಕ್ರಮದಲ್ಲಿ ಶರಣೆ ಹಡಪದ ಲಿಂಗಮ್ಮನವರ ಲಿಂಗನಿಷ್ಠೆ ಕುರಿತುಅನುಭಾವ ನೀಡುತ್ತಾ ಮಾತನಾಡಿದ ಮಾತೋಶ್ರೀ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ.ನೀಲಾಂಬಿಕಾ ಪೋಲಿಸ್ ಪಾಟೀಲರವರು ಶರಣರ ವಚನಗಳು ಬೌದ್ಧಿಕ ಪ್ರದರ್ಶನಕ್ಕಾಗಿ ಬರೆದವುಗಳಲ. ತಮ್ಮ ಬದುಕನ್ನು, ಬದುಕಿನಲ್ಲಿ ಅನುಭವಿಸಿದ್ದನ್ನು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ.ಅವರಅನುಭಾವದ ನೆಲೆಯಲ್ಲಿ ನಿಂತು ನೋಡಿದಾಗ ಮಾತ್ರ ಶರಣರ ವಚನಗಳ ಆಂತರ್ಯ ನಮ್ಮಅರಿವಿಗೆ ನಿಲುಕುತ್ತದೆ. ಲಿಂಗಮ್ಮನವರು ಕನಿಷ್ಟದಲ್ಲಿ ಹುಟ್ಟಿದೆ,ಉತ್ತಮರಲ್ಲಿ ಬೆಳೆದೆ ಎಂಬ ಮಾತನ್ನು ಹೇಳುವಾಗ ಬಸವಾದಿ ಶರಣರ ಸಂಪರ್ಕದಿಂದತಮ್ಮಜೀವನ ಪಾವನವಾಯಿತ್ತೆಂದು ಹೇಳುವಲ್ಲಿ ಆಗಿನ ಸಾಮಾಜಿಕ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ಬಸವಣ್ಣನವರುಜಾತಿತಾರತಮ್ಯ ಮಾಡದೆ ಸರ್ವರಿಗೂಇಷ್ಟಲಿಂಗಧಾರಣೆಯ ಅವಕಾಶ ಕಲ್ಪಿಸಿದ್ದು ನಿಜಕ್ಕೂಕ್ರಾಂತಿಕಾರಿ ಸಂಗತಿಎಂದರು.

Contact Your\'s Advertisement; 9902492681

ಲಿಂಗ ಶರಣರಲ್ಲಿ ಕೇವಲ ಒಂದುಉಪಾಸ್ಯ ಸಾಧನವಾಗಿ ಉಳಿಯಲಿಲ್ಲ. ಲಿಂಗ ಅವರಲ್ಲಿತತ್ತ್ವವಾಯಿತು,ಲಿಂಗ ಅವರಲ್ಲಿ ನಡೆಯಾಯಿತು, ಲಿಂಗ ಅವರಲ್ಲಿ ನುಡಿಯಾಯಿತು. ಲಿಂಗವನ್ನು ಸಮಾನತೆಯ ಪ್ರತೀಕವನ್ನಾಗಿಸಿದವರು ಬಸವಣ್ಣನವರು. ಇಷ್ಟಲಿಂಗವೆಂದರೆತನು ಸಮಾನತೆ, ಇಷ್ಟಲಿಂಗವೆಂದರೆ ಮನಸಮಾನತೆ, ಇಷ್ಟಲಿಂಗವೆಂದರೆ ಧನಸಮಾನತೆಯನ್ನಾಗಿಸಿದರು.ಸಮಾಜದಎಲ್ಲಾ ವರ್ಗದವರೂ ಲಿಂಗಧಾರಿಗಳಾಗಿ ಆಧ್ಯಾತ್ಮದಉನ್ನತ ಸ್ಥಿತಿಗೆ ತಲುಪುವುದಕ್ಕೆ ಬಸವಣ್ಣನವರು ಅನುವು ಮಾಡಿಕೊಟ್ಟರು. ಲಿಂಗಮ್ಮನವರುತಮ್ಮ ಮತ್ತೊಂದು ವಚನದಲ್ಲಿ ನಮ್ಮ ಶರಣರು ಜಗದೊಳಗೆ ಹುಟ್ಟಿ, ಜಗವನ್ನೇ ಮರೆತು, ಎಚ್ಚೆತ್ತುಚಿತ್ತಸುಯಿಧಾನವ ಮಾಡಿ, ಕಳವಳಕ್ಕೊಳಗಾಗಿದ್ದ ಕಾಯವನ್ನೆ ಸರ್ವಾಂಗ ಲಿಂಗಮಾಡಿದರುಎಂದು ಹೇಳುತ್ತಾರೆ. ಬಸವಣ್ಣನವರ ಈ ಪ್ರಯತ್ನದಿಂದ ಸರ್ವರಆತ್ಮಕಲ್ಯಾಣ ಆಕಾಲಕ್ಕೆ ಸಾಧ್ಯವಾದುದುಒಂದುಅಪೂರ್ವದ ಸಂಗತಿಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ ಅವರು ಲಿಂಗತತ್ತ್ವವನ್ನೇ ನಮ್ಮಲ್ಲಿಅನೇಕರುತಿಳಿದುಕೊಂಡಿಲ್ಲ. ಇಷ್ಟಲಿಂಗಧಾರಿಗಳಾದಾಗ ಮಾತ್ರ ಲಿಂಗತತ್ತ್ವದಅರಿವು ಸಾಧ್ಯವಾಗುವುದುಎಂದರು.

ವೇದಿಕೆಯಲ್ಲಿಕಲಬುರಗಿಬಸವ ಸಮಿತಿಯಉಪಾಧ್ಯಕ್ಷರಾದಡಾ.ಜಯಶ್ರೀದಂಡೆ, ದತ್ತಿ ದಾಸೋಹಿಗಳಾದ ಜಿಲ್ಲಾ ಹಡಪದ ಸಮಾಜದಅಧ್ಯಕ್ಷರೂಆದ ಶ್ರೀ ಈರಣ್ಣ ಹಡಪದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿಡಾ.ವೀರಣ್ಣದಂಡೆ, ಶ್ರೀ ಬಂಡಪ್ಪಕೇಸೂರ ಹಾಗೂ ಇತರರು ಪಾಲ್ಗೊಂಡಿದ್ದರು.ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here