ಕಲಬುರಗಿ: SUCI-C ಹಾಗೂ RKS ಜಿಲ್ಲಾ ಸಮಿತಿಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಪ್ರತಿಭಟನೆಯನ್ನು ನಡೆಸಲಾಯಿತು.
ರಾಜ್ಯ ಬಿ.ಜೆ.ಪಿ. ಸರ್ಕಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಯು ಸಿ ಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಎಚ್. ವಿ. ದಿವಾಕರ್ ರವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಸಮಿತಿಯ ಸದಸ್ಯರಾದ ವಿ. ನಾಗಮ್ಮಾಳ್ ಹಾಗೂ ಎಸ್.ಎಮ್. ಶರ್ಮಾ ಅವರು ಉಪಸ್ಥಿತರಿದ್ದರು.
ಆರ್.ಕೆ.ಎಸ್. ನ ಜಿಲ್ಲಾ ಉಪಾಧ್ಯಕ್ಷರಾದ ವಿಶ್ವನಾಥ ಸಿಂಗೆ ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಎಸ್.ಬಿ. ಇದ್ದರು.
ಎಸ್.ಯು.ಸಿ.ಐ(ಸಿ) ಸದಸ್ಯರಾದ ಹನುಮಂತ ಎಸ್. ಎಚ್., ಸ್ನೇಹಾ ಕಟ್ಟಿಮನಿ, ಈರಣ್ಣಾ ಇಸಬಾ ಸಹ ಉಪಸ್ಥಿತರಿದ್ದರು.