ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳ ಬಂಧನಕ್ಕೆ ಬ್ಲಾಕ್ ಕಾಂಗ್ರೆಸ್ ಆಗ್ರಹ

0
42

ಶಹಾಬಾದ: ಮಾಜಿ ಕೇಂದ್ರ ಸಚಿವ,ನೂತನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಮುಖಂಡ ವಿಜಯಕುಮಾರ ರಾಮಕೃಷ್ಣ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದ ದೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮುಕುಟ ಎಂದರೆ ಮಲ್ಲಿಕಾರ್ಜುನ ಖರ್ಗೆ. ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ದೂರು ಸಲ್ಲಿಸಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ರಾಜ್ಯ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ದೇಶದ ಗೃಹ ಮಂತ್ರಿ ಅಮಿತಾ ಶಾ ಅವರು ಗೃಹ ಇಲಾಖೆಯ ಮಂತ್ರಿಯಾಗಿರುವುದಕ್ಕೆ ಲಾಯಕ್ಕಿಲ್ಲ.

Contact Your\'s Advertisement; 9902492681

ಹನ್ನೊಂದು ಬಾರಿ ಗೆದ್ದು, ರಾಜ್ಯದಲ್ಲಿ, ಕೇಂದ್ರದಲ್ಲಿ ಸಚಿವರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಖರ್ಗೆ ಅವರಿಗೆ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕುವಂತ ಹೀನ ಕೃತ್ಯಕ್ಕೆ ಮುಂದಾಗಿದ್ದಾರೆ. ಈಬಗ್ಗೆ ಕ್ರಮ ಕೈಗೊಳ್ಳಬೇಕಾದ ರಾಜ್ಯಸರ್ಕಾರ ಸುಮ್ಮನಾಗಿದೆ. ಕೂಡಲೇ ವಿಶೇಷ ತಂಡ ರಚಿಸಿ, ದುಷ್ಕರ್ಮಿಯನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ರಾಜ್ಯಾಧ್ಯಾದಂತ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ,ವಿಜಯಕುಮಾರ ಮುಟ್ಟತ್ತಿ,ಮೃತ್ಯುಂಜಯ ಹಿರೇಮಠ, ಕುಮಾರ ಚವ್ಹಾಣ, ಗಿರೀಶ ಕಂಬಾನೂರ,ಹಣಮಂತ ಹರಸೂರ,ಡಾ.ಅಹ್ಮದ್ ಪಟೇಲ್, ಹಾಷಮಖಾನ, ಶರಣಗೌಡ ಪಾಟೀಲ ಗೋಳಾ, ಸಾಹೇಬಗೌಡ ಬೋಗುಂಡಿ,ರಾಜೇಶ ಯನಗುಂಟಿಕರ್, ಅನ್ವರ್ ಪಾಶಾ, ನಾಗೇಂದ್ರ ನಾಟೇಕಾರ,ಇನಾಯತಖಾನ ಜಮಾದಾರ,ಕಿರಣ ಚವ್ಹಾಣ,ನಾಗೇಂದ್ರ ನಾಟೇಕಾರ,ಸಯ್ಯದ್ ಜಹೀರ್, ಶಂಕರ ಕೋಟನೂರ್, ಶಕೀಲ ಇಂಗಳಗಿ,ಫಜಲ್ ಪಟೇಲ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here