ಸೋಂಕಿತ ಬಂಜಾರಾ ಜನರಿಗಿಲ್ಲ ಸೂಕ್ತ ಚಿಕಿತ್ಸೆ: ಆರೋಪ

0
82

ವಾಡಿ: ಕೊರೊನಾ ಸೋಂಕು ದೃಢಪಟ್ಟ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರನ್ನು ಆಸ್ಪತ್ರೆಯಲ್ಲಿ ಸುರಕ್ಷತೆಯಿಂದ ಚಿಕಿತ್ಸೆ ಕೊಡಿಸಬೇಕಾದ ಜಿಲ್ಲಾಡಳಿತ, ದೊಡ್ಡ ಕಟ್ಟಡವೊಂದರಲ್ಲಿ ಎಲ್ಲರನ್ನು ಒಟ್ಟಿಗೆ ಕೂಡಿಹಾಕಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ವಾಡಿ ವಲಯ ಅಧ್ಯಕ್ಷ ಶಂಕರ ಜಾಧವ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಜಾಧವ, ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಲಂಬಾಣಿ ಸಮುದಾಯವನ್ನು ಕೆಟ್ಟ ದೃಷ್ಠಿಯಿಂದ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಕಮಲಾಪುರ ಹಾಗೂ ಜೇವರ್ಗಿ ತಾಲೂಕುಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಬಂಜಾರಾ ಜನರು ಸರಕಾರದ ಆದೇಶದಂತೆ ೧೪ ದಿನಗಳ ಸರಕಾರಿ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

Contact Your\'s Advertisement; 9902492681

ಕೋವಿಡ್-೧೯ ಪರೀಕ್ಷೆಗೂ ಸಹಕಾರ ನೀಡಿದ್ದಾರೆ. ಪರೀಕ್ಷಾ ವರದಿ ಬರುವ ಮುಂಚೆಯೇ ಕ್ವಾರಂಟೈನ್ ದಿಂದ ಬಿಡುಗಡೆ ಮಾಡಿ ಸೋಂಕು ಪಸರಿಸಲು ಕಾರಣವಾಗಿರುವ ಸರಕಾರ, ವಲಸಿಗರು ಮನೆಗೆ ಬಂದು ವಾರದ ನಂತರ ಸೋಂಕು ದೃಢಪಟ್ಟ ವರದಿ ಬಹಿರಂಗ ಪಡಿಸಿದ್ದಾರೆ. ಇದರಿಂದ ಸೋಂಕಿತರಲ್ಲದವರಿಗೂ ಸೋಂಕು ಹರಡುವಂತಾಗಿದ್ದು, ಇದಕ್ಕೆ ಸರಕಾರದ ಅವೈಜಾನಿಕ ನಿರ್ಧಾಗಳೇ ಕಾರಣವಾಗಿವೆ ಎಂದು ದೂರಿದ್ದಾರೆ.

ಸೋಂಕಿತ ಲಂಬಾಣಿ ಜನರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ದಿರುವ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಆಸ್ಪತ್ರೆಯಲ್ಲಿರಿಸದೆ ಕೇಸರಟಗಿ ದತ್ತಾತ್ರೇಯ ಉದ್ಯಾನವನ ಹತ್ತಿರ ಇರುವ ಕಟ್ಟಡದ ಹಾಲ್‌ನಲ್ಲಿ ಆಶ್ರಯ ಒದಗಿಸಲಾಗಿದೆ. ಕ್ರೂರಿ ಕೋವಿಡ್-೧೯ಕ್ಕೆ ಸಂಬಂದಿಸಿದ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿಲ್ಲ. ವೈದ್ಯರು ರೋಗಿಗಳನ್ನು ನೋಡಲು ಬರುತ್ತಿಲ್ಲ. ಆರೋಗ್ಯ ಸಹಾಯಕರಿಂದ ಬೇಕಾಬಿಟ್ಟಿ ಮಾತ್ರೆಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಅಗತ್ಯ ಸೌಲಭ್ಯಗಳಿಂದ ವಂಚಿಸಲಾಗಿದೆ.

ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುವ ಮೂಲಕ ಸರಕಾರ ಬಂಜಾರಾ ಜನರಿಗೆ ಹಿಂಸೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಂಕರ ಜಾಧವ, ಸಮುದಾಯದ ಜನರಿಗೆ ಗೌರವಯುತವಾದ ಆರೋಗ್ಯ ಸೇವೆ ಲಭ್ಯವಾಗುವಂತೆ ಮತ್ತು ಕುಂದು ಕೊರತೆಗಳಾಗದಂತೆ ಕ್ರಮಕೈಗೊಳ್ಳಬೇಕಾದ ನಮ್ಮದೇ ಸಮುದಾಯದ ರಾಜಕಾರಣಿ ಸಂಸದ ಡಾ.ಉಮೇಶ ಜಾಧವ ಕೂಡ ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ತಮ್ಮ ಕ್ಷೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕಾದ ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯಸಿಂಗ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಕ್ವಾರಂಟೈನ್ ಕೇಂದ್ರಗಳಲ್ಲಿ ಮತ್ತು ಆಸ್ಪತ್ರೆಯಲ್ಲಿ ತೊಂದರೆ ಅನುಭವಿಸುತ್ತಿರುವ ವಲಸಿಗರ ಸಹಾಯಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here