ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

0
31

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಪ್ರಭು ಪಾಟೀಲ ಅವರು ಸಲಹೆ ಸೂಚನೆಗಳನ್ನು ನೀಡಿದರು.

ಸೋಮವಾರದಂದು ನಗರದ ಟೌನ್ ಹಾಲ್‍ನಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಸಾರ್ವಜನಿಕರು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದರು.
ಮಹಾನಗರ ಪಾಲಿಕೆಯಿಂದ ಸರಿಯಾದ ರೀತಿಯಲ್ಲಿ ಯು.ಜಿ.ಡಿ. ಪೈಪ್ ಲೈನ್ ಕ್ಲೀಯರ್ ಮಾಡಬೇಕು. ಮತ್ತು ಕಲಬುರಗಿಯಲ್ಲಿ ಎಲ್ಲಾ ವಾರ್ಡಗಳಲ್ಲಿ ಆಶಾಕಾರ್ಯಕರ್ತರು ಹಾಗೂ ಅಂಗನವಾಡಿ ಶಿಕ್ಷಕರಿಂದ ಜಾಗೃತಿ ಮೂಡಿಸುವಂತ ಕೆಲಸ ಆಗಬೇಕು ಎಂದು ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಸಲಾಯಿತು.

Contact Your\'s Advertisement; 9902492681

ಮಹಾನಗರ ಪಾಲಿಕೆವತಿಯಿಂದ ಪ್ರತಿದಿನ ಮಷೀನ್‍ನಿಂದ ಫಾಗಿಂಗ್ ಮಾಡುವುದರಿಂದ ಸೂಳ್ಳೆಗಳ ನಿಯಂತ್ರಣ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂದರು.

ಡೆಂಗ್ಯೂ ಮತ್ತು ಚೆಕನ್ ಗುನ್ಯ ರೋಗದ ಹತ್ತೋಟೆಗೆ ಮುಖ್ಯ ವಿಧಾನ ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ ಡ್ರಮ್, ಬ್ಯಾರಲ್ ಮಡಿಕೆ ಉಪಯೋಗಿಸು ಒರಳುಕಲ್ಲು ಮುಂತಾದ ಶೇಖರವಾಗುವ ನೀರಿನಲಿ ಉತ್ಪತ್ತಿಯಾಗುವುದರಿಂದ ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕು ಎಂದರು.

ಬಹಳಷ್ಟು ಏರಿಯಾದಲ್ಲಿ ಸರಿಯಾಗಿ ಕ್ಲೀನ್ ಇರುವುದಿಲ್ಲ ಕಸಕಟ್ಟಿಗಳನ್ನು ಒಂದೆಡೆ ಸೇರಿ ಅಲ್ಲಿಯೇ ನೀರು ನಿಲ್ಲುತ್ತವೆ ಮಹಾನಗರ ಪಾಲಿಕೆಯವರು ಎಚ್ಚೆತ್ತುಗೊಂಡು ಕೆಲಸ ಕಾರ್ಯಗಳನ್ನು ಸರಿಯಾದ ರೀತಿಯ ನಿರ್ವಹಿಸಬೇಕು ಯಾವುದೇ ಸಾರ್ವಜನಿಕರ ತೊಂದರೆಯಾಗಬಾರದು ಎಂದರು.

ಡೆಂಗ್ಯೂಜ್ವರ್ ಚಿಕನ್ ಗುನ್ಯ ರೋಗ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಒಂದು ತಂಡಗಳನ್ನು ರೂಪಿಸಿ ತಂಗು, ಗುಂಡಿಗಳನ್ನು ಮುಚ್ಚಬೇಕು ಎಲ್ಲಿಯೂ ನೀರು ನಿಲ್ಲದೆ ಹಾಗೆ ನೋಡಿಕೊಳ್ಳಬೇಕು, ಇತ್ತೀಚಿನ ದಿನಗಳ ರಸ್ತೆಗಳ ಬದಿಯಲ್ಲಿ ಕಂಟ್ಟಿಗಳು ಬೆಳೆದಿರುತ್ತವೆ ಮಹಾನಗರ ಪಾಲಿಕೆಯವರ ಕ್ರಮಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರತಿಕಾಂತ ಸ್ವಾಮಿ ಮಾತನಾಡಿ, ಡೆಂಗ್ಯೂಜ್ವರ ವೈರಸ್‍ನಿಂದ ಉಂಟಾಗುವ ಕಾಯಿಲೆ ಇದ್ದು ಸೊಂಕು ಹೊಂದಿದ ಈಡಿಸ್ ಇಜಿಪ್ಟ್ ಸೋಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಪ ನೀರಿನಲ್ಲಿ ಸಂತಾನಭಿವೃದ್ಧಿ ಮಾಡುತ್ತದೆ ಹಾಗೂ ಹಗಲೊ ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ ಎಂದರು.

ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ ದೇವಿದಾಸ ಪಾಟೀಲ್ ಮಾತನಾಡಿ, ಜಿಲ್ಲೆಯಾದ್ಯಂತ ಯು.ಜಿ.ಡಿ. ಡ್ರ್ಯಾನೇಜ್ ಪೈಪ್ ಲೈನ್ ಕನೆಕ್ಷನ್ ಇರುವುದಿಲ್ಲ ಕೆಲವೊಂದು ಪೈಪುಗಳು ರಸ್ತೆ ಬದಿಯಲ್ಲಿ ಬಿದ್ದು ಹಾಳಾಗಿರುತ್ತವೆ ಅಧಿಕಾರಿಗಳು ಪ್ರತಿಯೊಂದು ವಾರ್ಡ್‍ಗಳಿಗೆ ಹೋಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದರು.

ಈಗಾಗಲೇ ಯುಜಿಡಿಗೆ ಪೈಪ್‍ಲೈನ್ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅಂದಾಗ ಕಾರ್ಯನಿರ್ವಾಹ ಅಭಿಯಂತರು 540 ಕೋಟಿ ಅಂದಾಜು ಮೊತ್ತ ಆಗಬಹುದು ಎಂದು ಅಧಿಕಾರಿಗಳು ಸಭೆಯ ಗಮನಕ್ಕ ತಂದರು.

ಇನ್ನೂ ಒಂದು ವಾರದೊಳಗೆ ನಿಮ್ಮ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಬೇಕು ಸಾರ್ವಜನಿಕರಿಂದ ದೂರುಗಳು ಬಂದರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಆಯುಕ್ತರು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ (ಆಡಳಿತ) ಉಪ ಆಯುಕ್ತರಾದ ಆರ್.ಪಿ. ಜಾಧವ, ಕಾರ್ಯನಿರ್ವಾಹಕ ಅಭಿಯಂತರು ಶಿವನಗೌಡ ಪಾಟೀಲ, ವಲಯ ಆಯುಕ್ತರಾದ ಮುಜಾಮಿಲ್, ರಮೇಶ ಪಟ್ಟೇದಾರ, ಉಮೇಶ ಚವ್ಹಾಣ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ವಿವೇಕನಾಂದ ಟೆಂಗೆ, ಕಾರ್ಯನಿರ್ವಾಹಕ ಅಭಿಯಂತರ ಜವೇರಿಯಾ, ಪುರುಷೋತ್ತಮ, ಕೆ.ಎಸ್. ಪಾಟೀಲ, ಪ್ರದೀಪ,ಸೇರಿದಂತೆ ಮಹಾನಗರ ಪಾಲಿಕೆ ಆರೋಗ್ಯ ಇನ್ಸಪೆಕ್ಟರ್, ಜೂನಿಯರ್ ಇಂಜಿನಿಯರುಗಳು ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here