ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

0
37

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಆಗಮಿಸಿ ಗೋಧೂಳಿ ಪೂಜೆ ಸಲ್ಲಿಸಿದರು.

ಶ್ರೀ ಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸಮಾಜದ ಅಸ್ಮಿತೆ ಜಾಗ್ರತಿ ಗೊಳಿಸಲು, ಉತ್ತರ ಕರ್ನಾಟಕದ ಎಲ್ಲಾ ತಾಲ್ಲೂಕಿನ ಗ್ರಾಮಕ್ಕೆ ಭೇಟಿ ನೀಡಿ, ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯ ಉಳಿಸಿ, ಬೆಳೆಸಲು ಪ್ರಯತ್ನ ಮಾಡುತ್ತಿದ್ದೇವೆ, ಸಮಾಜ ಭಾಂಧವರು ಕೂಡಾ ಈ ಕಾರ್ಯದಲ್ಲಿ ಕೈ ಜೋಡಿಸಿದರೆ ನಮ್ಮ ಹಿರಿಯ ಪೂಜ್ಯರ ಆಶೆ ಮುಂದೆ ವರಿಸಲು ಸಾಧ್ಯ ವಾಗುತದೆ ಎಂದು ತಿಳಿಸಿದರು. ಕಾರಣ ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ ನೀಡಿದರು.

Contact Your\'s Advertisement; 9902492681

ಶ್ರೀನಿವಾಸ ಬಲಪೂರ ರವರು ಶ್ರೀ ಗಳನ್ನು ಮತ್ತು ಅವರ ಜೊತೆ ಆಗಮಿಸಿದ ಸಮಾಜದ ಹಿರಿಯರಾದ ಮಹದೇವಪ್ಪ ಜಾಲಾವಾದಿ ಹಾಗೂ ವೀರಸಂಗಪ್ಪ  ಬುಳ್ಳ ರವರಿಗೆ ಸ್ವಾಗತಿಸಿದರು.

ಸಂಸ್ಥೆಯ ಸಂಸ್ಥಾಪಕ ಸಂಚಾಲಕರಾದ ನ್ಯಾಯವಾದಿ ಜೇ.ಎಸ್.ವಿನೋದ ಕುಮಾರ  ಪ್ರಾಸ್ತಾವಿಕವಾಗಿ ಮಾತನಾಡಿ ಹಟಗಾರ ಸಮಾಜ ಮಕ್ಕಳಿಗೆ ತಮ್ಮ ಮಠಕ್ಕೆ ನೀಡಿದರೆ ಅವರಿಗೆ, ಸಂಸ್ಕಾರ ನೀಡಿ ಮತ್ತೆ ಸಮಾಜ ಕಾರ್ಯ ಕ್ಕೆ ಅಣಿ ಮಾಡಿ ನೀಡುತ್ತೆವೆ. ಈ ನಿಟ್ಟಿನಲ್ಲಿ ಸಮಾಜ ಭಾಂಧವರು ಹೆಚ್ಚಿನ ಚಿಂತನೆ ಗೈದು ಕನಿಷ್ಠ ಗ್ರಾಮಕ್ಕೆ ಒಬ್ಬ ಶಿಶುಗಳನ್ನು ನೀಡಿ, ಸಮಾಜ ಉಳಿಸುವಲ್ಲಿ ಸಹಕರಿಸಿ ಎಂದು ಕೋರಿದ್ದಾರೆ ಎಂದು ತಿಳಿಸಿದರು.

ಕಾರ್ಯಾಲಯಕ್ಕೆ ಮೊಟ್ಟಮೊದಲು ಬಾರಿಗೆ ಆಗಮಿಸಿದ ಶ್ರೀ ಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಯವರು ಶ್ರೀಗಳಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು.

ನ್ಯಾಯವಾದಿ ಸತೀಶ ಜಮಖಂಡಿ ವಂದಿಸಿದರು. ಶ್ರೀ. ಗಳು ಎಲ್ಲಾ ಭಕ್ತರಿಗೆ ಆಶೀರ್ವದಿಸಿದರು. ಮಠದ ಕರ ಪತ್ರಿಕೆಗಳ್ಳನ್ನು ಸಮಾಜ ಭಾಂಧವರು ಎಲ್ಲಾ ಗ್ರಾಮಕ್ಕೆ ತಲುಪುವಂತೆ ಸೇವೆಗೈಯಲು ಕೋರಿದರು. ಲಕ್ಸ್ಮೀಕಾಂತ ಜೋಳದ, ಕುಶಾಲ ಯಡವಳ್ಳಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here