ಸುರಪುರ: ದೇಶದ ಪ್ರತಿಯೊಬ್ಬರ ಹಸಿವು ತಣಿಸುವ ರೈತ ಮತ್ತು ದೇಶ ಕಾಯುವ ಸೈನಿಕರು ನಮ್ಮ ರಕ್ಷಕರು ಅವರನ್ನು ದೇಶವಾಸಿಗಳು ಯಾರೂ ಮರೆಯಬಾರದು ಎಂದು ತಹಸಿಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿದರು.
ನಗರದ ತಹಸೀಲ್ ರಸ್ತೆಯಲ್ಲಿನ ಹುತಾತ್ಮ ಯೋಧ ಶರಣ ಬಸವ ಕೆಂಗುರಿ ಪುತ್ಥಳಿ ಬಳಿಯಲ್ಲಿ ಗೃಹ ರಕ್ಷಕ ದಳದಿಂದ ಹಮ್ಮಿಕೊಂಡಿದ್ದ ೮ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಯೋದರು ಈ ದೇಶದ ನಿಜವಾದ ಹೀರೊಗಳು ಅಂತಹ ವೀರ ಯೋಧನ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದು ಹೆಮ್ಮೆ ಮೂಡಿಸಿದೆ ಎಂದರು.
ನಂತರ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಯಾದಗಿರಿ ಜಿಲ್ಲಾ ಕಂಪನಿ ಕಮಾಂಡೆಂಟ್ ಹಾಗೂ ಸುರಪುರ ಘಟಕಾಧಿಕಾರಿ ಯಲ್ಲಪ್ಪ ಹುಲಕಲ್ ಮಾತನಾಡಿ,ವೀರಯೋಧ ಶರಣಬಸವ ಕೆಂಗುರಿ ಸೇನೆಗೆ ಸೇರುವ ಮುನ್ನ ಎರಡು ವರ್ಷ ಇಲ್ಲಿಯೆ ಗೃಹ ರಕ್ಷಕದಳದಲ್ಲಿ ಸೇವೆ ಸಲ್ಲಿಸಿದ್ದನು,ಇಲ್ಲಿಯುಕೂಡ ಉತ್ತಮವಾದ ಸೇವೆಯ ಮೂಲಕ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ,ಇಂದು ಶರಣಬಸವ ಇಲ್ಲವಾದರು ನಮ್ಮ ನೆನಪುಗಳಲ್ಲಿ ಚಿರವಾಗಿದ್ದಾನೆ ಎಂದರು.ಸೇನೆಗೆ ಸೇರುವುದು ದೇಶದ ಬಹುದೊಡ್ಡ ಹೆಮ್ಮೆಯ ಸಂಗತಿಯಾಗಿದೆ,ಆದ್ದರಿಂದ ದೇಶದ ಪ್ರತಿಯೊಂದು ಕುಟುಂಬದ ಒಬ್ಬ ವ್ಯಕ್ತಿ ಸೇನೆಗೆ ಸೇರುವಂತಾಗಬೇಕು ಅಂದಾಗ ಭಾರತ ಜಗತ್ತಿನಲ್ಲಿಯೆ ಬಲಿಷ್ಠ ರಾಷ್ಟ್ರವಾಗಲಿದೆ.ಆ ನಿಟ್ಟಿನಲ್ಲಿ ನಮ್ಮ ದೇಶದ ಯುವಕರು ಸೇನೆಯತ್ತ ಒಲವು ತೊರಬೇಕು ಇದಕ್ಕೆ ನಮ್ಮ ಶರಣ ಬಸವನೆ ಮಾದರಿ ಎಂದರು.
ನಂತರ ಗೃಹ ರಕ್ಷಕ ರಾಜು ಪಾಟೀಲ್ ಮಾತನಾಡಿ, ಕಾರ್ಯಕ್ರಮದ ಆರಂಭದಲ್ಲಿ ಶರಣ ಬಸವನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವೀರ ಯೋಧನ ಸವಿನೆನಪಿಗಾಗಿ ಪುತ್ಥಳಿ ಬಳಿಯಲ್ಲಿ ಸಸಿಗಳನ್ನು ನಡೆಲಾಯಿತು.ನಂತರ ಎಲ್ಲಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೀರಯೋಧನ ತಂದೆ ಹಾಗು ಕುಟುಂಬಸ್ಥರು ಭಾಗವಹಿಸಿದ್ದರು.ವೆಂಕಟೇಶ ಸುರಪುರಕರ್ ಸ್ವಾಗತಿಸಿದರು,ರಮೇಶ ಅಂಬುರೆ ವರದಿ ಒಪ್ಪಿಸಿದರು,ಬುಡ್ಡಪ್ಪ ಚವಲ್ಕರ್ ನಿರೂಪಿಸಿದರು,ಹೇಮು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು,ಭೀಮರಾಯ ಹುಲಕಲ್ ವಂದಿಸಿದರು.ಮಲ್ಲಿಕಾರ್ಜುನ ಗುರಗುಂಟಿ,ಅಲ್ಲಾವುದ್ದಿನ್,ಆದಪ್ಪ ಕೆಂಗುರಿ,ಗುರುನಾಥ ಜಾದವ್,ಅಮರಪ್ಪ ಬೇವಿನಾಳ,ಕಿರಣ ಕುಮಾರ,ಪರಶುರಾಮ ಹುಲಕಲ್,ನಿಂಗನಗೌಡ ಗೋನಾಲ,ಸುರೇಶ ಗೋನಾಲ ಸೇರಿದಂತೆ ಅನೇಕ ಜನ ಗೃಹ ರಕ್ಷಕ ದಳದ ಸಿಬ್ಬಂದಿಗಳಿದ್ದರು.