ಚಿತ್ರಕಲೆಯಲ್ಲಿ ಕಾಯಕದ ಶರಣರು 26 ರಂದು ದತ್ತಿ ಉಪನ್ಯಾಸ

0
84

ಕಲಬುರಗಿ: ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಕಲ್ಬುರ್ಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಚೈತನ್ಯಮಯಿ ಟ್ರಸ್ಟ್ (ರಿ) ಚೈತನ್ಯಮಯಿ ಆರ್ಟ್ ಗ್ಯಾಲರಿ ಕಲಬುರಗಿ ಶರಣರ ಸ್ಮರಣಾರ್ಥ ಮೇ. 26 ರಂದು ಸಂಜೆ 6 ಗಂಟೆಗೆ ಅರವಿನ ಮನೆ 566 ನೇ ದತ್ತಿ ಕಾರ್ಯಕ್ರಮ ನೆರವೇರಲಿದೆ ಎಂದು ದತ್ತಿ ದಾಸೋಹಿಗಳಾದ ಡಾ. ಎ.ಎಸ್. ಪಾಟೀಲ ಭಂಕೂರ ಹಾಗೂ ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ತಿಳಿಸಿದ್ದಾರೆ.

ಮಹಾಮಹಿಮ ಸಂಗನಬಸವಣ್ಣನವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಹೃದ್ರೋಗ ತಜ್ಞ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಚಿತ್ರಕಲೆಯಲ್ಲಿ ಕಾಯಕದ ಶರಣರು ವಿಷಯ ಕುರಿತು ಅನುಭಾವ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಹಂಪಿ ಕನ್ನಡ ವಿವಿ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ. ಮೋಹನರಾವ ಪಂಚಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಹಿರಿಯ ಚಿತ್ರಕಲಾವಿದ ದಿ. ಬಸವರಾಜ ಮುಗಳಿ ಅವರ ಪತ್ನಿ ಸಾವಿತ್ರಿಬಾಯಿ ಮುಗಳಿ ಅವರಿಗೆ ಇದೇವೇಳೆಯಲ್ಲಿ ಚೈತನ್ಯಶ್ರೀ ಕಲಾ ಪ್ರಶಸ್ತಿ-೨೦೧೯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here