ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ವತಿಯಿಂದ ಭಾರತ-ಚೀನಾ ಗಡಿಯಲ್ಲಿ ವೀರ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಹಾದೇವಯ್ಯ ಕರದಳ್ಳಿಜಿ, ಡಾ.ಅಲೋಕ್ ಪಾಟೀಲ್ ರೇವೂರ, ಅಶೋಕ ಗುರೂಜಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವೀರೆಂದ್ರ ಪಾಟೀಲ್ ರಾಯಕೋಡ, ಶಿವಲಿಂಗ ಪಾಟೀಲ್, ಪ್ರದೀಪ ಭಾವಿ, ಶರಣು ಔಂಟಗಿ, ಅಂಬರೀಷ ಪಾಟೀಲ್, ಮೃತ್ಯುಂಜಯ ಪಲ್ಲಾಪೂರ ಮಠ, ಶಿವು ತೊಳನೂರ, ಶರಣು ಮಣ್ಣೂರ, ಸಂಗಮೇಶ ಸಿಂಪಿ, ವಿಶಾಲ, ಆನಂದ, ಮಲ್ಲು ಭಡಜಿ ಸೇರಿದಂತೆ ಇನ್ನಿತರರು ಇದ್ದರು.