ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜೇನವೇರಿ ವಿನೋದಕುಮಾರ ನಾಮ ನಿರ್ದೇಶನಕ್ಕೆ ಒತ್ತಾಯ

0
115

ಕಲಬುರಗಿ: ರಾಮಲಿಂಗ ಚೌಡೇಶ್ವರಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ವಸ್ತ್ರ ಜಯಂತಿಯಲ್ಲಿ ಹಿರಿಯ ರಾಜಕೀಯ ನಾಯಕರಾದ ಚಂದ್ರಶೇಖರ ಸುಲ್ತಾನಪುರ್(ಕನಕಟ್) ಮಾತನಾಡುತ್ತಾ, ನೈಜ ಸಮಾಜ ಸೇವಕರಾದ ನ್ಯಾಯವಾದಿ ಜೇನವೇರಿ ವಿನೋದಕುಮಾರರನ್ನು ಕಲ್ಯಾಣ ಕರ್ನಾಟಕ ಭಾಗದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನಕ್ಕೆ ಆಯ್ಕೆ ಮಾಡಬೇಕೆಂದು ಸಿಎಂಗೆ ಒತ್ತಾಯಿಸಿದ್ದರು.

Contact Your\'s Advertisement; 9902492681

ಜಿಲ್ಲಾ ನೇಕಾರ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಭೀಮಾಶಂಕರ ಮಾತನಾಡಿ, ಯುವಕರು ಹಾಗೂ ಸಮಾಜದ  ರಾಜ್ಯ  ಸಂಸ್ಥಾಪಕ ಸದಸ್ಯರಾದ ವಿನೋದಕುಮಾರ. ಜೇ. ಶಾಸಕರದಷ್ಟೇ ನಮ್ಮ ಎಲ್ಲಾ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡುತ್ತಾ ಈ ಭಾಗದಲ್ಲಿ ನೇಕಾರ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಿಗೊಳಿಸಿ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಜೇನವೇರಿ ನಾಮನಿರ್ದೇಶನ ಗೊಳಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆದು ಅಗ್ರಹಿಸುವುದಾಗಿ ತಿಳಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here