ಸುರಪುರ: ನಗರದಾದ್ಯಂತ ಅನೇಕ ಕಡೆಗಳಲ್ಲಿ ನಿರ್ಗತಿಕರು ಮತ್ತು ಅನಾಥರು ಹಲವರಿದ್ದು ಅವರಿಗೆ ಬಸ್ ನಿಲ್ದಾಣ ಮತ್ತು ಯಾವುದಾದರು ದೇವಸ್ಥಾನಗಳ ಆವರಣಗಳೆ ಆಶ್ರಯ ತಾಣಗಳಾಗಿವೆ,ಅವರಿಗಾಗಿ ಒಂದು ನಿಗದಿತ ಸ್ಥಳವಿಲ್ಲದೆ ಅನಾಥರು ನಿತ್ಯವು ತೊಂದರೆ ಪಡುತ್ತಿದ್ದಾರೆ.ಆದ್ದರಿಂದ ಸರಕಾರ ನಗರದಲ್ಲಿ ಒಂದು ಅನಾಥಾಶ್ರಮ ಆರಂಭಿಸುವ ಅಗತ್ಯವಿದೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮದನ್ ಕಟ್ಟಿಮನಿ ತಿಳಿಸಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ,ನಿತ್ಯವು ನಮ್ಮ ಸಂಘಟನೆಯಿಂದ ಅನೇಕ ಜನ ಭೀಕ್ಷುಕರು ಮತ್ತು ಬಸ್ ನಿಲ್ದಾಣದಲ್ಲಿ ಇರುವ ಅನಾಥರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ.ಎಷ್ಟೋ ಜನ ಅನಾಥರನ್ನು ನೋಡಿದಾಗ ಮನ ಕಲಕುತ್ತದೆ.ಅವರಿಗೆ ಸರಿಯಾದ ಬಟ್ಟೆ ಹೊದಿಕೆ ಹಾಸಿಗೆಗಳಿಲ್ಲದೆ ಬಸ್ ನಿಲ್ದಾಣದಲ್ಲಿ ಮಲಗುತ್ತಾರೆ.ಬೇರೆ ಎಲ್ಲಾಕಡೆಗಳಲ್ಲಿ ಅನಾಥರಿಗಾಗಿ ಒಂದು ನೆಲೆಯನ್ನು ಕಲ್ಪಿಸಲಾಗಿರುತ್ತದೆ.
ಆದರೆ ನಮ್ಮ ಸುರಪುರದಲ್ಲಿ ಇಲ್ಲಿಯವರೆಗೂ ಒಂದು ಅನಾಥ ಕೇಂದ್ರವನ್ನು ತೆರೆದಿಲ್ಲ.ಆದ್ದರಿಂದ ಸರಕಾರ ಕೂಡಲೆ ನಗರಕ್ಕೆ ಅನಾಥಾಶ್ರಮ ಮಂಜೂರು ಮಾಡಬೇಕು.ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದಲೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ,ಇದಕ್ಕೆ ಸರಕಾರ ಮಂಜೂರಾತಿಗೊಳಿಸುವಂತೆ ವಿನಂತಿಸಿ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಯಮನೇಶ ಮುಂದಿನಮನಿ,ಭೀಮರಾಯ ಹುಲಕಲ್,ಧರ್ಮರಾಜ ಇದ್ದರು.