ಮಣ್ಣೆತ್ತಿನ ಅಮವಾಸ್ಯೆಗು ತಟ್ಟಿದ ಕರೋನಾ ಎಫೆಕ್ಟ್: ಮಣ್ಣೆತ್ತು ಖರೀದಿಗು ಬರ

0
34

ಸುರಪುರ: ಕೊರೊನಾ ಎಫೆಕ್ಟ್ ಮಣ್ಣೆತ್ತಿನ ಅಮವಾಸ್ಯೆಯ ಮೇಲು ಪರಿಣಾಮ ಬೀರಿದ್ದು ಈಬಾರಿ ಜನರು ಹೆಚ್ಚಾಗಿ ಹೊರಗೆ ಬರದೆ ಮಣ್ಣೆತ್ತಿನ ಖರೀದಿಗು ಬರ ಕಾಣಿಸಿತು.ನಗರದ ಮಹಾತ್ಮ ಗಾಂಧಿ ವೃತ್ತ,ದರಬಾರ ರಸ್ತೆ,ರಂಗಂಪೇಟೆ ಆಟೋ ನಿಲ್ದಾಣ ಮತ್ತಿತರೆ ಕಡೆಗಳಲ್ಲಿ ವ್ಯಾಪಾರಕ್ಕೆಂದು ಇಡಲಾಗಿದ್ದ ಮಣ್ಣೆತ್ತು ಖರೀದಿಸುವವರಿಲ್ಲದೆ ಖಾಲಿ ಕಾಣುತ್ತಿತ್ತು.

ಈಬಾರಿಯ ಮಣ್ಣೆತ್ತಿನ ಅಮಾವಾಸ್ಯೆಯ ಕುರಿತು ಮಣ್ಣೆತ್ತಿನ ವ್ಯಾಪಾರಿ ಆನಂದ ಕುಂಬಾರ ಅವರಿಗೆ ಪತ್ರಿಕೆಯಿಂದ ಮಾತನಾಡಿಸಿದಾಗ,ಈಬಾರಿ ಮಣ್ಣೆತ್ತಿನ ವ್ಯಾಪಾರ ತುಂಬಾ ಡಲ್ಲಾಗಿದೆ,ಪ್ರತಿ ವರ್ಷ ಕನಿಷ್ಠ ಒಂದು ಸಾವಿರ ಜೊತೆ ಮಣ್ಣೆತ್ತುಗಳನ್ನು ಮಾರಲಾಗುತ್ತಿತ್ತು.ಆದರೆ ಈಬಾರಿ ಕೊರೊನಾ ವೈರಸ್ ಹಾವಳಿಯಿಂದ ಜನರು ಮನೆಯಿಂದ ಹೊರಗೆ ಬರದೆ ಹಬ್ಬಕ್ಕೂ ಬಿಸಿ ತಟ್ಟಿದೆ.ಜನರು ಕೊಳ್ಳುತ್ತಾರೆಂದು ಎರಡು ನೂರೈವತ್ತು ಜೊತೆ ಮಣ್ಣೆತ್ತುಗಳನ್ನು ಬೇರೆ ಕಡೆಯಿಂದ ತರಲಾಗಿತ್ತು.

Contact Your\'s Advertisement; 9902492681

ಆದರೆ ಕೊಳ್ಳುವವರಿಲ್ಲದೆ ತಂದ ಅಷ್ಟು ಎತ್ತುಗಳಲ್ಲಿ ಇನ್ನೂ ಹಾಗೆಯೇ ಉಳಿದಿವೆ.ಇದರಿಂದ ನಮ್ಮ ಕುಂಬಾರ ವೃತ್ತಿಯ ಮೇಲೂ ಪರಿಣಾಮ ಬೀರಿದೆ.ಜನರು ಮನೆಯಿಂದ ಹೊರಗೆ ಬರಲು ಹಿಂದೆಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದರ ಮದ್ಯೆಯೆ ಅಲ್ಲಲ್ಲಿ ಜನರು ಮಣ್ಣೆತ್ತುಗಳನ್ನು ಖರೀದಿಸಿ ಖುಷಿಯಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂತು.ಗ್ರಾಹಕರೊಬ್ಬರನ್ನು ಮಾತನಾಡಿಸಿದಾಗ,ಕೊರೊನಾ ಕಾರಣದಿಂದ ಜನರ ಬಳಿ ಹಣವಿಲ್ಲ.ಆದರೂ ಪ್ರತಿ ವರ್ಷ ಮಣ್ಣೆತ್ತು ತಂದು ಮನೆಯಲ್ಲಿ ಪೂಜೆ ಮಾಡುವ ಸಂಪ್ರದಾಯವಿದೆ.

ಆದ್ದರಿಂದ ಒಂದು ಜೊತೆ ಎತ್ತಿಗೆ ನೂರು ರೂಪಾಯಿ ಇದೆ.ಇನ್ನೂ ಬಣ್ಣ ಹಚ್ಚಿದ ಮಣ್ಣೆತ್ತಿನ ಜೋಡಿಗೆ ಇನ್ನೂರೈವತ್ತು ರೂಪಾಯಿ ಇದೆ.ಆದರೂ ಅನಿವಾರ್ಯವಾಗಿ ಖರೀದಿಸಬೇಕಿದೆ ಎನ್ನುತ್ತಾರೆ ಗ್ರಾಹಕ ಮಾಳಪ್ಪ ಕಿರದಳ್ಳಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here