ಸುರಪುರ: ನಗರದ ರಂಗಂಪೇಟೆಯಲ್ಲಿನ ಡಾ: ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಸುರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ದುರ್ಗಪ್ಪ ಗೋಗಿಕರ್ ಇವರನ್ನು ಮಾದಿಗ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ದುರ್ಗಪ್ಪ ಗೋಗಿಕರ್ ಮಾತನಾಡಿ,ನನ್ನ ಸಮುದಾಯದ ತಾವೆಲ್ಲರು ಇಂದು ನನ್ನನ್ನು ಸನ್ಮಾನಿಸಿ ಗೌರವಿಸುವ ಮೂಲಕ ಕೆಲಸಕ್ಕೆ ಶಕ್ತಿ ಮತ್ತು ಉತ್ಸಾಹ ಮೂಡಿಸಿದ್ದಿರಿ. ತಮ್ಮೆಲ್ಲರಿಗೂ ಋಣಿಯಾಗಿರುವುದಾಗಿ ತಿಳಿಸಿದರು.ಅಲ್ಲದೆ ನನ್ನ ಮೇಲೆ ಭರವಸೆಯನ್ನಿಟ್ಟು ನನಗೆ ಉಪಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ರೈತರ ಸೇವೆಗೆ ಅವಕಾಶ ಮಾಡಿಕೊಟ್ಟು ನನ್ನ ಆಯ್ಕೆಗೆ ಸಹರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಅಲ್ಲದೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ರೈತರ ಯಾವುದೆ ಸಮಸ್ಯೆಗಳಿರಲಿ,ಅಂತಹ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.ರೈತರಿಗೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ.ರೈತರಿಗೆ ಯಾವುದೇ ರೀತಿಯ ಮಾರುಕಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ನನ್ನನ್ನು ಸಂಪಕಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖಂಡ ಭೀಮಾಶಂಕರ ಬಿಲ್ಲವ ಮಾತನಾಡಿ,ದುರ್ಗಪ್ಪಣ್ಣ ಗೋಗಿಕೆರ್ ಅವರನ್ನು ಎಪಿಎಂಸಿ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸುವ ಮೂಲಕ ನಮ್ಮ ಸಮುದಾಯಕ್ಕೆ ಸ್ಥಳಿಯವಾಗಿ ರಾಜಕೀಯ ಪ್ರಾತಿನಿಧ್ಯ ನೀಡಿದಂತಾಗಿದೆ.ಇವರ ಆಯ್ಕೆಗೆ ಸಹಕರಿಸಿದ ಶಾಸಕರು ಮತ್ತು ಎಲ್ಲಾ ಸದಸ್ಯರಿಗೂ ಅಭಿನಂಧಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಗುತ್ತೆದಾರ ಹಯ್ಯಾಳಪ್ಪ ಜಾಲಿಬೆಂಚಿ,ನ್ಯಾಯವಾದಿ ಯಲ್ಲಪ್ಪ ಹುಲಿಕಲ್,ಪಂಡೀತ ನಿಂಬೂರ,ಮಲ್ಲಣ್ಣ ವಜ್ಜಲ್,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಮಾತನಾಡಿದರು.
ಉಪನ್ಯಾಸಕ ಭೀಮಣ್ಣ ಯಾದಗಿರಕರ್ ನಿರೂಪಿಸಿದರು,ಬಾಲರಾಜ ತುಪ್ಪದ ಸ್ವಾಗತಿಸಿದರು,ರಾಜು ದೀವಳಗುಡ್ಡ ವಂದಿಸಿದರು.ಕಾರ್ಯಕ್ರಮದಲ್ಲಿ ಮಲ್ಲು ಬಿಲ್ಲವ್,ತಿಮ್ಮಣ್ಣ ಬಿಲ್ಲವ್,ದುರ್ಗಪ್ಪ ನಾಗರಾಳ,ನಾಗರಾಜ ಓಕಳಿ,ಭೀಮಣ್ಣ ದೀವಳಗುಡ್ಡ,ಮಹೇಂದ್ರ ಬಿಲ್ಲವ್,ದೇವಿಂದ್ರಪ್ಪ ಸೂಗುರ,ರಾಜು ದೇವರಗೋನಾಲ,ಮಲ್ಲಿಕಾರ್ಜುನ ಮಂದಾಲೆ,ಚಂದಪ್ಪ ಓಕಳಿ,ಮಲ್ಲಿಕಾರ್ಜುನ ಲಕ್ಷ್ಮೀಪುರ ಇದ್ದರು.