ಚಿತ್ತಾಪುರ: ದಿನನಿತ್ಯ ನನ್ನ ಫೋನ್ ಗೆ 100 ರಿಂದ150 ರವರೆಗೆ ಕರೆ ಬರುತ್ತಿವೆ. ಕಚೇರಿಯ ಕೆಲಸದ ಒತ್ತಡದಲ್ಲಿ ಇವರೆಲ್ಲರ ಕರೆಗಳನ್ನು ಸ್ವೀಕರಿಸಿ ಮಾತನಾಡಲು ನನಗೆ ಸಮಯ ಸಾಲುತ್ತಿಲ್ಲ ಹೀಗಾಗಿ ಪ್ರತಿ ಶನಿವಾರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಸಮಯ ನಿಗದಿ ಮಾಡಲಾಗಿದೆ ಎಂದು ತಾಲೂಕು ಪಂಚಾಯತ್ ಇಓ ಡಾ.ಬಸಲಿಂಗಪ್ಪ ಡಿಗ್ಗಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇಲಧಿಕಾರಿಗಳು, ಜನಪ್ರತಿನಿಧಿಗಳು, ಇತರರಿಂದ ಬಹುಮುಖ್ಯ ಕರೆಗಳು ಬರುತ್ತವೆ ಇವೆಲ್ಲರ ಕರೆ ಸ್ವೀಕರಿಸಿ ಕೆಲಸ ಮಾಡುವಷ್ಟರಲ್ಲಿ ದಿನದ ಸಮಯ ಹೋಗುತ್ತಿದೆ, ಆದ್ದರಿಂದ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 5 ರವರೆಗೆ ಮತ್ತು ಶನಿವಾರ ಪೂರ್ತಿ ದಿನ ಸಾರ್ವಜನಿಕರ ಭೇಟಿಗಾಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಮಯ ನಿಗದಿ ಮಾಡಲಾಗಿದೆ.
ಅಷ್ಟೇ ಅಲ್ಲದೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಈ 08474-236528, ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.