ಹೆಣ್ಣು ಮಕ್ಕಳ “ಬದುಕ”ನ್ನು ಬರಹದ ರೂಪದಲ್ಲಿ ಬಿಚ್ಚಿಟ್ಟ ಕನ್ನಡದ ಅತೀ ಶ್ರೇಷ್ಠ ಸಾಹಿತಿ ಡಾ. ಗೀತಾ ನಾಗಭೂಷಣ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಒಮ್ಮೆಲೆ ದುಃಖ ಇಮ್ಮಡಿಸಿ ಬಂತು.
ನನಗೆ ಅತೀ ಹೆಚ್ಚು ಸಾಹಿತಿಕ ಒಳ ನೋಟಗಳನ್ನು ಪರಿಚಯಿಸಿದ ಕೀರ್ತಿ ಗೀತಮ್ಮ ಗೆ ಸೇರುತ್ತದೆ. ಅವರು ರಚಿಸಿದ “ಬದುಕು” ಕಾದಂಬರಿ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಇತ್ತಿಚಿಗೆ ಹಿರಿಯ ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ ಅವರ ಆರೋಗ್ಯ ಕ್ಷಿಣಿಸಿದಾಗ, ಅವರ ಆರೋಗ್ಯ ವಿಚಾರಿಸಲು ನಾನು ಹಾಗು ಗೀತಮ್ಮ ನಗರದ ಸತ್ಯ ಆಸ್ಪತ್ರೆ ಹೋಗಿದ್ದೇವು.
ಅದೆ ನಮ್ಮಿಬ್ಬರ ಕೊನೆ ಭೇಟಿ. ಕಾದಂಬರಿ, ಕವನ ಹಾಗು ನಾಟಕ ಸೇರಿದಂತೆ ಸಾಹಿತ್ಯದ ಅನೇಕ ಕ್ಷೇತ್ರಗಳಲ್ಲಿ ಡಾ.ಗೀತಾ ನಾಗಭೂಷಣ ಅವರು ಸೇವೆ ಸಲ್ಲಿಸಿದ್ದ ಅವಿಸ್ಮರಣಿಯ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ನಿಸರ್ಗ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
-ಸುರೇಶ ಬಡಿಗೇರ, ಸದಸ್ಯರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಕಲಬುರಗಿ.