ಮಾಲಗತ್ತಿ, ಶಂಕರವಾಡಿ ಗ್ರಾಮಗಳ ಸೇರ್ಪಡೆಗೆ ವಿರೋಧ

0
34

ಶಹಾಬಾದ: ಚಿತ್ತಾಪುರ ತಾಲೂಕಿನಿಂದ ಮಾಲಗತ್ತಿ ಮತ್ತು ಶಂಕರವಾಡಿ ಗ್ರಾಮಗಳನ್ನು ಬೇರ್ಪಡಿಸಿ ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಿರುವುದಕ್ಕೆ ವಿರೋಧವಿದೆ. ಹೀಗಾಗಿ ಇದನ್ನು ಕೂಡಲೇ ಕೈ ಬೀಡಬೇಕು ಎಂದು ಎರಡು ಗ್ರಾಮದ ಗ್ರಾಮಸ್ಥರು ಆಗ್ರಹಿಸಿದರು.

ನೂತನ ಶಹಾಬಾದ ತಾಲೂಕಿಗೆ ಚಿತ್ತಾಪುರ ತಾಲೂಕಿನ ೭ ಗ್ರಾಮಗಳು ಸೇರ್ಪಡೆ ಆಗಿವೆ. ಆದರೆ ಚಿತ್ತಾಪುರಕ್ಕೆ ಸಮೀಪದ ಮಾಲಗತ್ತಿ ಮತ್ತು ಶಂಕರವಾಡಿ ಗ್ರಾಮಗಳು ಕೈ ಬಿಟ್ಟು ಯಥಾ ಪ್ರಕಾರ ಚಿತ್ತಾಪುರ ತಾಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಎರಡು ಗ್ರಾಮಗಳು ಮೊದಲಿನಿಂದಲೂ ಚಿತ್ತಾಪುರ ತಾಲೂಕಿಗೆ ಒಳಪಟ್ಟಿರುತ್ತದೆ.ಅದಕ್ಕೆ ಯಾವುದೇ ತೊಂದರೆ ಕೊಡದೇ ಚಿತ್ತಾಪೂರ ತಾಲೂಕಿನಲ್ಲಿಯೇ ಇರಲಿ. ಒಂದು ವೇಳೆ ಶಹಾಬಾದ ತಾಲೂಕಿಗೆ ಸೇರ್ಪಡೆಯಾದರೆ ಎರಡು ಗ್ರಾಮಗಳ ಜನರು ಕೂಡಿಕೊಂಡು ಉಗ್ರ ಹೋರಾಟ ನಡೆಸಲಾಗುವುದೆಂದು ಆಗ್ರಹಿಸಿದರು.

ಕಂದಾಯ ಸಚಿವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-೨ ತಹಶೀಲ್ದಾರ್ ರವೀಂದ್ರ ಧಾಮಾ ಅವರಿಗೆ ಸಲ್ಲಿಸಿದರು.
ಮುಖಂಡರಾದ ಪ್ರಕಾಶ ಜೈನ್, ಮಾಲಗತ್ತಿ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ.ಹೆಚ್.ಅಲ್ಲೂರ್, ಚಂದ್ರಶೇಖರ ರಾವೂರಕರ್,ಮರಲಿಂಗಪ್ಪ ತಳವಾರ, ಮರೆಣ್ಣ ಮೂಲಿಮನಿ, ಗಜೇಂದ್ರ ಅಲ್ಲೂರ್,ಈಶ್ವರರಾಜ ಯಾದಗಿರ,ಸಿದ್ದಣ್ಣ ಸಾಲೊಳ್ಳಿ, ಚಂದ್ರಕಾಂತ ತಡಕಲ್, ಶಂಕರ ಸಂಕನೂರ,ವಿವೇಕಾನಂದ ಮುಗುಟಾ,ವಿನೋದ ಹೊರಗಿನಮನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here