ಗೀತಾ ನಾಗಭೂಷಣ್ ಸಾಹಿತ್ಯ ಸೇವೆ ಅಪಾರವಾದದ್ದು: ಸಿದ್ದಲಿಂಗಣ್ಣ ಆನೆಗುಂದಿ.

0
58

ಶಹಾಪುರ : ನಾಡಿನ ಪ್ರಖ್ಯಾತ ಲೇಖಕಿ,ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಅವರ ಸಾಹಿತ್ಯ ಸೇವೆ ಅಪಾರವಾದದ್ದು ಅವರ ಅಕಾಲಿಕ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಸಂತಾಪ ಸೂಚಿಸಿ ಹೇಳಿದರು.

ಗೀತಾ ನಾಗಭೂಷಣ್ ಅವರು ಹಲವಾರು ಸಾಹಿತ್ಯದ ಕೃತಿಗಳು ರಚಿಸುವ ಮೂಲಕ ತಳ ಸಮುದಾಯದ ಮಹಿಳೆಯರ ಮೇಲಾಗುವ ಶೋಷಣೆಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿ ತಮ್ಮ ಬಂಡಾಯ ಸಾಹಿತ್ಯದ ಬರವಣಿಗೆಯ ಮೂಲಕ ಸಾಕಷ್ಟು ಬಿಸಿ ಮುಟ್ಟಿ ಮುಟ್ಟಿಸಿದವರು.

Contact Your\'s Advertisement; 9902492681

ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ,ಅವರು ರಚಿಸಿರುವ ಕಾದಂಬರಿಗಳು ಚಲನಚಿತ್ರಗಳಾಗಿವೆ ಇವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸಿದ್ದಾರೆ ಬದುಕು ಎಂಬ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಕೂಡ ಲಭಿಸಿದೆ.

ಸಾಹಿತಿಗಳಾದ ಶಿವಣ್ಣ ಇಜೇರಿ, ಕಥೆಗಾರರಾದ ಸಿದ್ದರಾಮ ಹೊನಕಲ್,ಪ್ರಗತಿಪರ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ, ಜಾನಪದ ಸಾಹಿತಿ ಹಾಗೂ ಕನ್ನಡ ಪಂಡಿತರಾದ ಡಾ. ಅಬ್ದುಲ್ ಕರೀ ಕನ್ಯಾಕೊಳ್ಳೂರ, ಶರಣ ಸಾಹಿತಿ ದೊಡ್ಡಬಸಪ್ಪ ಬಳೂರಗಿ,ಲಿಂಗಣ್ಣ ಪಡಶೆಟ್ಟಿ ಸಂಶೋಧಕರಾದ ಡಾ.ಮೊನಪ್ಪ ಶಿರವಾಳ, ಗುರುಬಸಯ್ಯ ಗದ್ದುಗೆ,ಗುಂಡಪ್ಪ ತುಂಬಿಗಿ,ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ, ಪಂಚಾಕ್ಷರಯ್ಯ ಹಿರೇಮಠ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here