ನೇತ್ರದಾನದ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗೋಣ

0
53

ಕಲಬುರಗಿ: ದೇಹ ದೇವರು ನಮಗೆ ನೀಡಿದ ಅಮೂಲ್ಯ ಆಸ್ತಿ. ಮರಣ ಹೊಂದಿದ ನಂತರ ನಮ್ಮ ಕಣ್ಣುಗಳನ್ನು ಮಣ್ಣುಪಾಲು ಮಾಡುವ ಬದಲು, ಕುರುಡರಿಗೆ ದಾನ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕಾರ್ಯವನ್ನು ಮಾಡೋಣವೆಂದು ಕಾರ್ಮಿಕ ಭವಿಷ್ಯ ನಿಧಿ ಇಲಾಖೆಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಅಧಿಕಾರಿ ಬಸವರಾಜ ಹೆಳವರ ಯಾಳಗಿ ಹೇಳಿದರು.

ಅವರು ತಮ್ಮ ಮರಣದ ನಂತರ ಪತ್ನಿ ಸಮೇತ ಬಸವೇಶ್ವರ ಆಸ್ಪತ್ರಗೆ ಉಭಯರು ನೇತೃದಾನ ಮಾಡುವ ವಾಗ್ದಾನ ಮಾಡಿದ್ದರ ಪ್ರಯುಕ್ತ ’ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ’ಕೆಎಚ್‌ಬಿ ಗೆಳೆಯರ ಬಳಗ’ ಇವುಗಳ ಸಂಯುಕ್ತವಾಗಿ ನಗರದ ಕೆಎಚ್‌ಬಿ ಗ್ರೀನ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಸುಮಾರು ೬.೨೮ಲಕ್ಷ ಕುರುಡರಿದ್ದಾರೆ. ದಿನಾಲೂ ನಿಧನರಾಗುವರ ಸಂಖ್ಯೆ ೬೨ ಸಾವಿರ. ಇವರು ನಿಧನರಾದ ನಂತರ ತಮ್ಮ ನೇತ್ರವನ್ನು ಕುರುಡರಿಗೆ ದಾನ ಮಾಡಿದರೆ, ಹತ್ತು ದಿವಸಗಳಲ್ಲಿ ಎಲ್ಲರೂ ಕಣ್ಣುಗಳು ಪಡೆದು, ಕುರುಡ ಮುಕ್ತ ಭಾರತ ನಿರ್ಮಾಣವಾಗುತ್ತದೆ. ಇದರ ಬಗ್ಗೆ ಚಿಂತನೆ ಜರುಗಬೇಕಾಗಿದೆಯೆಂದರು.

ಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ ಮಾತನಾಡಿ, ದೇಹದ ಅಮೂಲ್ಯವಾದ ಭಾಗವಾದ ನೇತ್ರದಾನವನ್ನು ದಂಪತಿ ಸಮೇತ ನೀಡುತ್ತಿರುವುದು ಸಮಾಜಕ್ಕೆ ಮಾದರಿಯ ಕಾರ್ಯವಾಗಿದೆಯೆಂದು ನುಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಬಿ.ಹೆಳವಾರ್, ನರಸಪ್ಪ ಬಿರಾದಾರ ದೇಗಾಂವ, ವೀರೇಶ ಬೋಳಶೆಟ್ಟಿ ನರೋಣಾ, ಹಣಮಂತರಾಯ ಅಟ್ಟೂರ, ಶಿವಕಾಂತ ಚಿಮ್ಮಾ, ಸೂರ್ಯಕಾಂತ ಸಾವಳಗಿ, ಡಿ.ವಿ.ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಕೆ.ಬಿ.ಕುಲಕರ್ಣಿ, ಮಹಾದೇವಯ್ಯ ಹಿರೇಮಠ, ಚಂದ್ರಕಾಂತ ತಳವಾರ, ಶಿವರಾಜ ಬಿರಬಿಟ್ಟಿ, ರವೀಂದ್ರ ಗುತ್ತೇದಾರ, ಪ್ರದೀಪ ಕುಂಬಾರಯಲ್ಲಪ್ಪ ಹೆಳವರ್, ಶಂಕ್ರಮ್ಮ ಹೆಳವರ್, ಸುದೀಕ್ಷಾ, ಸುಪ್ರೀತ್, ಶಂಭುಲಿಂಗ ವಾಡಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here