ಪಠ್ಯಪುಸ್ತಕಗಳಲ್ಲಿ ಕನ್ನಡಿಕರಣಕ್ಕೆ ಕ. ನವ ನಿರ್ಮಾಣ ಸೇನೆ ಆಗ್ರಹ

0
31

ಕಲಬುರಗಿ: ಕರ್ನಾಟಕ ಏಕೀಕರಣವಾಗಿ ೭೫ ವರ್ಷಗಳೇ ಕಳೆಯುತ್ತಾ ಬಂದರೂ ರಾಜ್ಯದ ಇತಿಹಾಸದ ಪಠ್ಯಪುಸ್ತಕಗಳು ಕನ್ನಡಿಕರಣವಾಗದಿರುವುದರ ಬಗ್ಗೆ ಕರ್ನಾಟಕ ನವನಿರ್ಮಾಣ ಸೇನೆ ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಪಠ್ಯಪುಸ್ತಕಗಳಲ್ಲಿ ಕನ್ನಡಿಕರಣಗೊಳಿಸಬೇಕೆಂದು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

ಸರಕಾರ ಈ ಕೂಡಲೇ ರಾಜ್ಯದ ಇತಿಹಾಸದ ಪಠ್ಯಪುಸ್ತಕಗಳ ಕನ್ನಡಿಕರಣಕ್ಕೆ ಮುಂದಾಗಬೇಕು ಕೇಂದ್ರಿಯ ವಿದ್ಯಾಲಯಗಳ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಕರ್ನಾಟಕದ ಇತಿಹಾಸ ಸೇರಿಸುವ ಕೆಲಸ ತಕ್ಷಣವೇ ಮಾಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ.

Contact Your\'s Advertisement; 9902492681

ತಲೆಯಲ್ಲಿ ಕರ್ನಾಟಕ ಇತಿಹಾಸದ ಜ್ಞಾನವಿಲ್ಲದ ಪಠ್ಯಪುಸ್ತಕ ರಚನಾ ಸಮಿತಿಯನ್ನು ವಿಸರ್ಜಿಸಿ ನಾಡಿನ ಇತಿಹಾಸ ಪೂಜ್ಯಕರನ್ನು ಆ ಸಮಿತಿಗೆ ನೇಮಿಸುವ ಕೆಲಸ ಸರಕಾರ ಮಾಡಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇವೆ. ಕರ್ನಾಟಕ ನವ ನಿರ್ಮಾಣ ಸೇನೆ ಕಲಬುರ್ಗಿ ಜಿಲ್ಲಾ ಮಹಿಳಾ ಘಟಕ ವತಿಯಿಂದ ರಾಜ್ಯ ಇತಿಹಾಸ ಕನ್ನಡೀಕರಣ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಪಾಟೀಲ್ ಅವರ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ರವಿ ಎನ್ ದೇಗಂವ್  ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಮಠಪತಿ  ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್ ಪಾಟೀಲ್  ನಗರ ಉಪಾಧ್ಯಕ್ಷ ಪ್ರಶಾಂತ್ ಕೋರಿ  ಸಂಘಟನಾ ಕಾರ್ಯದರ್ಶಿ ಹಣಮಂತ ಹಿರಾಪುರ್  ಉತ್ತರ ಮತಕ್ಷೇತ್ರ ಉಪಾಧ್ಯಕ್ಷ ಮಾಂತೇಶ್ ಹರವಾಳ  ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ರಾಜೇಶ್ವರಿ  ದಿಲೀಪ್ ಕಿರಸಾವಳಗಿ ಮತ್ತಿತರಿದ್ದರು

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here