ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ (ಸಿ) ಪ್ರತಿಭಟನೆ

0
35

ಶಹಾಬಾದ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಶುಕ್ರವಾರ ಎಸ್‌ಯುಸಿಐ (ಸಿ) ಪಕ್ಷದ ವತಿಯಿಂದ ನಗರದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿ  ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ,ಇಡೀ ದೇಶದಲ್ಲಿ ಕೊರೊನಾ ಮಹಾಮಾರಿ  ದಿನೇ ದಿನೇ ಅತ್ಯಂತ ವೇಗವಾಗಿ ಹರಡುತ್ತಿದ್ದು, ಜನಸಾಮನ್ಯರ ಬದುಕು ತತ್ತರಿಸಿ ಹೋಗಿದೆ.ಇದರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಳೆದ ೨೦ ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದೆ.ಇದರಿಂದ ನೇರವಾಗಿ ಸಾರ್ವಜನಿಕರ ಮೇಲೆ ಹೊರೆ ಬೀಳುತ್ತಿದೆ.ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಸರ್ಕಾರಗಳು ಕೋವಿಡ್-೧೯ ಸಂದರ್ಭದಲ್ಲಿ ಬೆಲೆ ಕಡಿಮೆ ಮಾಡುವುದನ್ನು ಬಿಟ್ಟು ಬೆಲೆ ಏರಿಕೆ ಮಾಡಿ, ಜನವಿರೋಧಿ ನೀತಿ ಅನುಸರಿಸಿ, ತಾವು ಮಾಡಿದ ಕೆಲಸ ಸರಿಯೆಂಬಂತೆ ವರ್ತಿಸುತ್ತಿದ್ದಾರೆ.

Contact Your\'s Advertisement; 9902492681

ಅಧಿಕಾರ ಪಡೆಯುವ ಸಂದರ್ಭದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೆವೆ.ಜನಪರ ಆಡಳಿತ ನೀಡುತ್ತೆವೆ. ಅಚ್ಚೆ ದಿನ್ ಆಯೆಂಗೆ ಎಂದು ಉದ್ದಕ್ಕೂ ಭಾಷಣ ಬಿಗಿದ ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಭರವಸೆಗಳನ್ನು ನೆನಪಿಸಿಕೊಳ್ಳಬೇಕಾಗಿದೆ.ಅಚ್ಚೆ ದಿನ್ ಎಂದರೆ ಇದೇನಾ ಎಂದು ವ್ಯಂಗವಾಡಿದರು.

ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸುಮಾರು ೩೨ ರೂ. ತೆರಿಗೆ ಹಾಕುತ್ತಿದೆ. ಕಚ್ಚಾ ತೈಲದ ಬೆಲೆ ಲೀಟರ್ ಪೆಟ್ರೋಲ್ ಬೆಲೆ ಕೇವಲ ರೂ. ೨೮ ಮಾತ್ರ. ಆದರೆ ನಾವು ಪೆಟ್ರೋಲ್ ಗೆ ರೂ. ೮೩ ಪಾವತಿಸುತ್ತಿದ್ದೇವೆ.ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಎಸ್‌ಯುಸಿಐ(ಸಿ) ಪಕ್ಷದ ಸದಸ್ಯ ರಾಘವೇಂದ್ರ.ಎಮ್.ಜಿ,ಗುಂಡಮ್ಮ ಮಡಿವಾಳ,ಗಣಪತರಾವ ಮಾನೆ, ಸಿದ್ದು ಚೌಧರಿ, ಮಾತನಾಡಿದರು.ಎಸ್‌ಯುಸಿಐ(ಸಿ) ಸದಸ್ಯ ಜಗನ್ನಾಥ.ಎಸ್.ಹೆಚ್, ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ .ಎಸ್.ಇಬ್ರಾಹಿಂಪುರ, ನೀಲಕಂಠ ಹುಲಿ, ತಿಮ್ಮಾಯ್ಯಾ ಬಿ ಮಾನೆ , ರಾಧಿಕಾ ಚೌದರಿ,ರಮೇಶ ದೇವಕರ್,ರಘು.ಜಿಮಾನೆ,ಹಣಮಂತ,ಕಿರಣ್.ಜಿ.ಮಾನೆ,ಅಜಯ್, ರಂಗನಾತ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here