-
ಸಾಜಿದ್ ಅಲಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಹಜರತ್ ಖಾಜಾ ಬಂದಾ ನವಾಜ್ (ರ.ಅ) ಅವರ ಇದೆ ಜುಲೈ 7 ರಿಂದ ಜುಲೈ 9 ವರಗೆ ಸಡಗರದಿಂದ ನಡೆಯಬೇಕಿದ್ದ ಉರುಸ್ ಶರೀಫ್ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಸರಳ ರೀತಿಯಲ್ಲಿ ಮನೆಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ದರ್ಗಾದ ಸಜ್ಜಾದಾ ನಶೀನ್, ಮುತುವಲಿ ಡಾ. ಸೈಯದ್ ಶಾ ಖುಸ್ರೊ ಹುಸೇನಿ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಜುಲೈ 7 ರಿಂದ ಒಂದು ತಿಂಗಳ ವರೆಗೆ ನಡೆಯಲಿರುವ ದರ್ಗಾದ ಉರುಸ್ ನ್ನು ಧರ್ಮ ಗುರುಗಳ ಸಮುಖದಲ್ಲಿ ಚರ್ಚೆ ನಡೆಸಿ ಜಾತ್ರೆಯನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಮತ್ತು ಭಕ್ತರು ದರ್ಗಾಕ್ಕೆ ಆಗಮಿಸಿ ಸಮಾಜದಲ್ಲಿ ಭೀತಿಯ ವಾತಾವರಣ ಮತ್ತು ಆರೋಗ್ಯ ಹಿತರಕ್ಷಣೆ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಒಂದು ತಿಂಗಳು ಸಡಗರದಿಂದ ಆಚರಿಸುವ ಖಾಜಾ ಬಂದಾ ನವಾಜ್ ಉರುಸ್ ಕೊರೊನಾ ಹಿನ್ನೆಲೆಯಲ್ಲಿ ಖಾಜಾ ಅವರ ಅನುಯಾಯಿಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ದರ್ಗಾದ ಉರುಸ್ ಶರೀಫ್ ನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದೇವೆ. ಭಕ್ತರು ಮತ್ತು ಅನುಯಾಯಿಗಳು ಮನವಿಯನ್ನು ಪಾಲಿಸಿ ಕೊರೊನಾ ಸಂಕಷ್ಟ ನಿವಾರಣೆಗೆ ಪ್ರರ್ಥಿಸಬೇಕು. – ಡಾ. ಸೈಯದ್ ಶಾ ಖೂಸ್ರೊ ಹುಸೇನಿ, ಸಜ್ಜಾದೆ ನಶೀನ್ ಹಜರತ್ ಖಾಜಾ ಬಂದಾ ನವಾಜ್ (ರ.ಅ) ಕಲಬುರಗಿ.
ಕಳೆದ ಮೂರು ತಿಂಗಳಿಂದ ದೇಶ ಕೊರೊನಾ ಸಂಕಷ್ಟ ಎದುರಿಸುತ್ತಿದ್ದು, ಸದ್ಯದ ವರೆಗೆ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ ಆದರಿಂದ ಈ ಬಾರಿ ದರ್ಗಾದ ಜಾತ್ರೆ ಸರಳವಾಗಿ ಆಚರಣೆಗೆ ದರ್ಗಾದ ಸಮಿತಿ ತೀರ್ಮಾನ ಕೈಗೊಂಡು, ಪ್ರತಿ ವರ್ಷ ನಡೆಯುವ ಖಾಜಾ ಬಜಾರ್ ಈ ವರ್ಷ ನಡೆಸಲು ಅನುಮತಿ ನೀಡಿಲ್ಲ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅದೇ ರೀತಿಯಲ್ಲಿ ಕೊರೊನಾ ಸಂಕಷ್ಟವನ್ನು ಸರಕಾರ ಲಾಕ್ ಡೌನ್ ಘೋಷಿಸಿ ಜನರ ಆರೋಗ್ಯ ರಕ್ಷಣೆಗೆ ಉತ್ತಮ ಕಾರ್ಯಗಳನ್ನು ಕೈಗೊಳುತ್ತಿರುವ ಬಗ್ಗೆ ಅಭಿನಂದಿಸಿದರು, ಕೋವಿಡ್-19 ಕುರಿತು ಸರಕಾರ ಮತ್ತು ಆರೋಗ್ಯ ಇಲಾಖೆ ನೀಡಿರುವ ಮುನ್ನಚೆರಿಕೆಗಳು ಎಲ್ಲರು ಪಾಲಿಸಿ ಕಡ್ಡಾಯವಾಗಿ ಎಂದು ಕರೆ ಈ ಸಂದರ್ಭದಲ್ಲಿ ಕರೆ ನೀಡಿದರು.