ಸುರಪುರ: ಆಶಾ ಕಾರ್ಯಕರ್ತೆಯರು ಕೋವಿಡ್-೧೯ ಕರ್ತವ್ಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.ಇಡೀ ರಾಜ್ಯದ ಜನತೆ ಕೊರೊನಾ ವಾರಿಯರ್ಸ್‌ಗಳಿಗೆ ಸಲ್ಲಿಸುವ ಗೌರವ ಆಶಾ ಕಾರ್ಯಕರ್ತೆಯರಿಗೂ ಸಲ್ಲುತ್ತದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಕೋಡೆಕಲ್‌ನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಆಶಾ ಕಾರ್ಯಕರ್ತೆಯರನ್ನುದ್ದೇಶಿಸಿ ಮಾತನಾಡಿದ ಅವರು,ಆಶಾ ಕಾರ್ಯಕರ್ತೆಯರು ಇಂದು ಪ್ರತಿ ಮನೆ ಮನೆಗೆ ನಿತ್ಯವು ಭೇಟಿ ನೀಡಿ ಕುಟುಂಬದ ಎಲ್ಲರ ಆರೋಗ್ಯ ವಿಚಾರಿಸುವ ಜೊತೆಗೆ ಕೊರೊನಾ ಸೊಂಕಿತರು ಮತ್ತು ಶಂಕಿತರಿಗೆ ಅಗತ್ಯ ನೆರವು ನೀಡುವಲ್ಲಿ ಶ್ರಮ ದೊಡ್ಡದಿದೆ.ಇಂದು ತಾವು ಅನೇಕ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವಿರಿ ಈ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮಾತನಾಡಿ,ನಮಗೆ ಕನಿಷ್ಠ ೧೨ ಸಾವಿರ ರೂಪಾಯಿಗಳ ವೇತನ ನೀಡಬೇಕು ಮತ್ತು ಕೊರೊನಾ ಸೊಂಕು ತಗುಲದಂತೆ ಮುನ್ನೆಚ್ಚೆರಿಕೆಗಾಗಿ ಹೆಚ್ಚಿನ ಗುಣಮಟ್ಟದ ಆರೋಗ್ಯ ಸುರಕ್ಷಿತಾ ಸಾಮಗ್ರಗಳನ್ನು ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಮಹಾದೇವಿ, ಶಾಂತಮ್ಮ,ನೀಲಮ್ಮ,ಈರಮ್ಮ,ಯಂಕಮ್ಮ,ಲಲಿತಾ ಸೇರಿದಂತೆ ಅನೇಕರಿದ್ದರು.