ಸುರಪುರ: ಶ್ರೀ ಪ್ರಭು ಕಾಲೇಜಿನ ಮುಖ್ಯ ದ್ವಾರದಲ್ಲಿನ ಚರಂಡಿ ಮೇಲೆ ನಿರ್ಮಿಸಲಾದ ಬ್ರೀಡ್ಜ್ ಕುಸಿತದಿಂದಾಗಿ ಚರಂಡಿ ನೀರು ಕಾಲೇಜಿನ ಮೈದಾನದೊಳಗೆ ಬಿಟ್ಟಿದ್ದರಿಂದ ಇಡೀ ಕಾಲೇಜು ಮೈದಾನ ಚರಂಡಿ ನೀರಿನಿಂದ ತುಂಬಿ ದುರ್ನಾತ ಬೀರುತ್ತಿದ್ದುದರಿಂದ ಸುತ್ತ ಮುತ್ತಲ ಮನೆಗಳ ಜನರು ಮೂಗು ಮುಚ್ಚಿಕೊಂಡೆ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲೇಜು ಮುಖ್ಯದ್ವಾರದಲ್ಲಿನ ಬ್ರೀಡ್ಜ್ ಕುಸಿತದಿಂದ ಕಾಲೇಜಿನ ಒಳಗೆ ಹೋಗುವ ದ್ವಾರ ಬಂದಾಗಿದ್ದು,ನಗರಸಭೆ ಅಧಿಕಾರಿಗಳು ಬ್ರೀಡ್ಜ್ ನಿರ್ಮಿಸಲು ಚರಂಡಿ ನೀರನ್ನು ಕಾಲೇಜು ಮೈದಾನದೊಳಗೆ ಹರಿಸಿದ್ದಾರೆ.ಇದರಿಂದ ಇಡೀ ಸುರಪುರ ನಗರದ ಎಲ್ಲಾ ಮನೆಗಳ ಕೊಳಚೆ ನೀರು ಹರಿದು ಕಾಲೇಜು ಮೈದಾನದಲ್ಲಿ ನಿಂತಿದ್ದರಿಂದ ವಯಸ್ಸಾದ ಮುದುಕರು ನಿತ್ಯವು ಕಾಲೇಜು ಮೈದಾನಕ್ಕೆ ವಾಯು ವಿಹಾರಕ್ಕೆ ಬರುವವರು ಚರಂಡಿ ನೀರಿನ ದುರ್ನಾತದಿಂದ ಬೇಸರಗೊಂಡಿದ್ದಾರೆ.ಕಾಲೇಜು ಮೈದಾನದ ಕಾನಿಕೇರಿ ಮತ್ತು ಝಂಡಾದ ಕೇರಿಯ ಜನರು ದುರ್ನಾತದಿಂದ ಬೇಸತ್ತಿದ್ದಾರೆ.ಕಾಲೇಜು ಮೈದಾನದೊಳಗೆ ನೀರು ಬಿಡುವ ಬದಲು ಈ ಮೊದಲು ಹೇಗೆ ಹರಿಯುತ್ತಿತ್ತೋ ಹಾಗೆಯೇ ನೀರು ಹರಿಸಿದಲ್ಲಿ ಜನರು ನೆಮ್ಮದಿಯಿಂದ ಇರುತ್ತಿದ್ದರು.
ಈಗ ಕಾಲೇಜು ಮೈದಾನವೆಲ್ಲ ಚರಂಡಿ ನೀರಿನಿಂದ ತುಂಬಿದ್ದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ವಯೋ ವೃಧ್ಧರು ಕಾಲೇಜು ಮೈದಾನಕ್ಕೆ ವಾಯು ವಿಹಾರಕ್ಕೆ ಹೋಗುವುದನ್ನು ನಿಲ್ಲಿಸುವಂತಾಗಿದೆ.
ಮೈದಾನದಲ್ಲಿಯ ಗಲೀಜಾದ ನೀರಿನಿಂದ ರೋಗಾಣುಗಳು ಹರಡುವ ಸಾಧ್ಯತೆಯಿದ್ದು,ಜನರಿಗೆ ಕಾಲರಾ ಮಲೇರಿಯಾದಂತ ಸಾಂಕ್ರಾಮಿಕ ರೋಗ ಹರಡಿದಲ್ಲಿ ಅದಕ್ಕೆ ನಗರಸಭೆಯೆ ಕಾರಣವಾಗಲಿದೆ ಎಂದು ಬೇಸರ ತೋಡಿಕೊಂಡು ಕೂಡಲೆ ಕಾiಗಾರಿ ಮುಗಿಸುವ ಜೊತೆಗೆ ಬ್ರೀಡ್ಜ್ ಕುಸಿದಿರುವ ಸ್ಥಳದ ಪಕ್ಕದಲ್ಲಿಯೇ ಚರಂಡಿ ನೀರು ಎಂದಿನಂತೆ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮೂಲ ನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ಆಗ್ರಹಿಸಿದ್ದಾರೆ.