ಶರಣ ಹಡಪದ ಅಪ್ಪಣ್ಣನವರ 886 ನೇ ಜಯಂತ್ಯೋತ್ಸವ ಆಚರಣೆ

0
43

ಕಲಬುರಗಿ: ಶರಣ ಹಡಪದ ಅಪ್ಪಣ್ಣನವರ ೮೮೬ನೇ ಜಯಂತ್ಯೋತ್ಸವವನ್ನು ಅವಿರಳ ಜ್ಞಾನಿ ಶ್ರೀಗುರು ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್ ಕಛೇರಿಂiiಲ್ಲಿ ಶ್ರೀಗುರು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕಲಬುರಗಿ, ಹಾಗು ಅವಿರಳ ಜ್ಞಾನಿ ಶ್ರೀಗುರು ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಎಸ್.ಕೆ ತೆಲ್ಲೂರ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆರಿಸಲಾಯಿತು.

ಟ್ರಸ್ಟ್ ಅಧ್ಯಕ್ಷರಾದ ಎಸ್.ಕೆ ತೆಲ್ಲೂರ ಈ ಸಂದರ್ಭದಲ್ಲಿ ಮಾತನಾಡಿ ಇಂದು ಶರಣ ಹಡಪದ ಅಪ್ಪಣ್ಣನವರ ೮೮೬ನೇ ಜಯಂತ್ಯೋತ್ಸವ, ಕೋವಿಡ್-೧೯ ಕಾರಣದಿಂದಾಗಿ ಸರಳವಾಗಿ ಮನೆಯಲ್ಲೆ ಜಯಂತ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಕೋವಿಡ್-೧೯ರ ವಿರುದ್ದ ಹೋರಾಡಲು ನಾವೆಲ್ಲ ಸರಕಾರದೊಂದಿಗೆ ಕೈ ಜೋಡಿಸಿ ರೋಗ ನಿಯಂತ್ರಣಕ್ಕೆ ಸಹಕರಿಸಬೇಕಾಗಿರುವದು ಈ ಘಳಿಗೆಯ ಅವಶ್ಯವಾಗಿದೆ ಎಂದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಶರಣರನ್ನು ನಾವು ಕೇವಲ ಅವರ ಜಯಂತಿಗಳಂದು ಸ್ಮರಿಸದೆ ದಿನ ನಿತ್ಯ ಸ್ಮರಿಸುವಂತಾಗಬೇಕು, ಕೇವಲ ಹಣೆಗೆ ವಿಭೂತಿ ಲೇಪನ ಮಾಡಿಕೊಂಡು ಡೋಂಗಿ ಶರಣ ಅನುಯಾಯಿಗಳಾಗುವ ಬದಲು ಶರಣರು ಮತ್ತವರ ಜೀವನ ಮೌಲ್ಯಗಳನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು, ಶರಣರು ಕೇವಲ ನುಡಿದವರಲ್ಲ, ಅವರು ನುಡಿದಂತೆ ನಡೆದವರು, ಪ್ರತಿಯೊಬ್ಬರು ಕಾಯಕ ನಿಷ್ಠೆ ಮೆರೆದು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕೆಂದು ತೆಲ್ಲೂರ ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಗುರು ಹಡಪದ, ರಾಜು ದುತ್ತರಗಾಂವ್, ಲಕ್ಷ್ಮೀ ಬಾಂದೇಕರ್, ಗುರು ಫಿರೋಜಾಬಾದ, ನಾಮದೇವ ಎಸ್. ಶವರೆ, ಶಿವಕುಮಾರ ಮಡಿವಾಳ, ರೇಖಾ ಎಸ್. ತೆಲ್ಲೂರ, ಶ್ರೇಯ ಎಸ್. ತೆಲ್ಲೂರ, ಓಂಕಾರ ಹಡಪದ, ಸಂಜೀವ್ ಕುಮಾರ ಹಡಪದ, ಮುಂತಾದವರು ಹಾಜರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here