ಆಳಂದ: ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಂಘಟನಾತ್ಮಕ ಶಕ್ತಿಯೇ ಪ್ರಮುಖವಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಸೋಮವಾರ ಆಳಂದ ಪಟ್ಟಣದ ಶಾಸಕರ ಗೃಹದಲ್ಲಿ ಸರಳವಾಗಿ ಜರುಗಿದ ಆಳಂದ ಮಂಡಲದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷದ ಬೆನ್ನುಲುಬು ಇದ್ದಂತೆ ಅವರ ಶ್ರಮದ ಫಲವೇ ಇಂದು ನಾವೆಲ್ಲ ಜನಪ್ರತಿನಿಧಿಗಳಾಗಿದ್ದೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ಮಾತ್ರ ಕಾರ್ಯಕರ್ತರ ಶ್ರಮದಿಂದ ಬೆಳೆದ ಪಕ್ಷವಾಗಿದೆ ಈ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಸ್ಥಾನಮಾನ, ಗೌರವಗಳು ಪ್ರಾಪ್ತವಾಗುತ್ತವೆ ಅದಕ್ಕಾಗಿ ಕಾರ್ಯಕರ್ತರು ಪರಿಶ್ರಮಪಡುವುದು ಅವಶ್ಯಕವಾಗಿದೆ. ಕೊರೋನಾ ಕಷ್ಟಕಾಲದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಅದರ ಮುಖಂಡರು ಹಾಗೂ ಕಾರ್ಯಕರ್ತರು ಜನರ ಮಧ್ಯೆ ಇದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನುಡಿದರು.
ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷ ಸದೃಢವಾಗಿದೆ ಸಶಕ್ತ ಕಾರ್ಯಕರ್ತರ ಪಡೆ ನಮ್ಮೊಂದಿಗೆ ಇದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪಾ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ. ಕೊರೋನಾ ನಿಯಂತ್ರಿಸುವಲ್ಲಿ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ನೂತನ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಪ್ರ. ಕಾರ್ಯದರ್ಶಿಗಳಾದ ಶರಣು ಕುಮಸಿ, ಪ್ರಕಾಶ ಮಾನೆ, ಉಪಾಧ್ಯಕ್ಷರುಗಳಾದ ಮಲ್ಲಿನಾಥ ಪಾಟೀಲ ಸಕ್ಕರಗಾ ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖಂಡರಾದ ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮಲ್ಲಿಕಾರ್ಜುನ ಕಂದಗೂಳೆ, ತಾ.ಪಂ ಉಪಾಧ್ಯಕ್ಷ ಗುರು ಪಾಟೀಲ ಇದ್ದರು.
ಅಶೋಕ ಹತ್ತರ್ಕಿ, ಪ್ರಫುಲ ಬಾಬಳಸೂರೆ, ಶ್ರೀಧರ ಕೊಟ್ಟರ್ಕಿ, ಸುಭಾಷ್ ರಾಠೊಡ, ಸಂಗೀತಾ ಹೇಮಾಜಿ, ಮುನ್ನಾಬಾಯಿ ಪಾಟೀಲ, ಗುರುಲಿಂಗಪ್ಪ ಪಾಟೀಲ, ಕರಬಸಪ್ಪ ಹೊಸಮನಿ, ಭೌರಮ್ಮ ತೋಳನೂರ, ಶಿವಕಿರಣ ಪಾಟೀಲ, ಜಗದೇವಿ ರೋಕಡೆ, ಸವಿತಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.