ಮನೆ-ಮಂಟಪ, ದೇವಸ್ಥಾನಗಳಲ್ಲಿ ಮದುವೆಗೆ ನಿಷೇಧ: ನೋಂದಣಾಧಿಕಾರಿ ಕಚೇರಿಯಲ್ಲಿ ಅವಕಾಶ

0
109

ಕಲಬುರಗಿ: ಸಾರ್ವಜನಿಕವಾಗಿ ನಡೆಯುವ ಮದುವೆಗಳಿಂದ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮನೆ-ಮಂಟಪ, ದೇವಸ್ಥಾನ & ಸಾರ್ವಜನಿಕ ಸ್ಥಳದಲ್ಲಿ‌ ಮದುವೆ ನಿಷೇಧ. ಪರ್ಯಾಯವಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ನಿಯಂಪ್ರಣಕ್ಕೆ ಬಾರದಿರುವುದು. ಆತಂಕಕಾರಿ ಸಂಗತಿಯಾಗಿದೆ. ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿರುವ ಪರಿಣಾಮ ಕೊರೊನಾ ಸೂಂಕು ಹರಡುತ್ತಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಸಾಂಕ್ರಾಮಿಕ ರೋಗಕ್ಕೆ 27 ಜವರು ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದವರಿಂದ 2053 ನಾಗರಿಕರಿಂದ ಒಟ್ಟು ರೂ. 191500 ದಂಡ ವಸೂಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದರಂತೆ ಹಲವಾರು ಸಂದರ್ಭದಲ್ಲ ಯುವಜನರು ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡಿ ಸಭೆ /ಮದುವೆ ಸಮಾರಂಭ / ಸಭಾಂಗಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತಿ ಹೆಚ್ಚಿನ ಜನರ ಸಂಪರ್ಕಕ್ಕೆ ಬರುತಿದೆ. ಎಲ್ಲಾ ರೀತಿಯ ಮದುವೆ ಹಾಗೂ ಇನ್ನಿತರ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ವಿಷೇಧಿಸಲಾಗಿದ್ದು, ರಜಿಸ್ಟರ ಮದುವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here