ಕೊರೋನಾ ಸೋಂಕಿನಿಂದ ಮತ್ತಿಬ್ಬರು ನಿಧನ: 19 ಡಿಸ್ಚಾರ್ಜ್

0
68

ಕಲಬುರಗಿ: ಕೊರೋನಾ‌ ಸೋಂಕಿನಿಂದ ಕಲಬುರಗಿ ನಗರದ ವೃದ್ಧ ಮತ್ತು ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿಯೊಬ್ಬ ಮೃತಪಟ್ಟಿರುವುದು ಮಂಗಳವಾರದ ಕೋವಿಡ್-19 ಬುಲೆಟಿನ್ ವರದಿಯಿಂದ ದೃಢವಾಗಿದೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌29ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

Contact Your\'s Advertisement; 9902492681

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪ್ರದೇಶದ 71 ವರ್ಷದ ವೃದ್ಧ (P-26671) ಜು.5 ರಂದು ಕಲಬುರಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿರುತ್ತಾರೆ.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ 40 ವರ್ಷದ ಪುರುಷ (P-26681) ಜು.3 ರಂದು ಅಸ್ಪತ್ರೆಗೆ ದಾಖಲಾಗಿ ಜು.5 ರಂದು ನಿಧನ ಹೊಂದಿದ್ದು, ಮಂಗಳವಾರ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here