ಸುರಪುರ: ನಗರ ಪೊಲೀಸ್ ಠಾಣೆಯ ಪೇದೆಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ.ಠಾಣೆಯ ಮುಖ್ಯದ್ವಾರ ಬಂದ್ ಮಾಡಿ ಯಾವುದೇ ಸಾರ್ವಜನಿಕರಿಗೆ ಠಾಣೆ ಪ್ರವೇಶ ನಿಷೇಧಿಸಲಾಗಿದೆ.ಸಾರ್ವಜನಿಕರು ತಮ್ಮ ದೂರುಗಳಿಗಾಗಿ ಹೊರಗೆ ಹಾಕಲಾದ ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದು ಮತ್ತು ಬೇರೆ ಠಾಣೆಯ ಸಿಬ್ಬಂದಿಗಳನ್ನು ಸೇವೆಗೆ ನಿಯೋಜಿಸಿ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಪೊಲೀಸ್ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಯಂಕಾಲದ ವೇಳೆಗೆ ಠಾಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಭಗವಾನ್ ಸೋನೆವಾಣೆ ಭೇಟಿ ನೀಡಿ ಸೀಲ್‌ಡೌನ್ ಮಾಡಿಸಿದರು.ಅಲ್ಲದೆ ಡಿವಾಯ್‌ಎಸ್ಪಿ,ಪಿಐ,ಪಿಎಸೈ ಹಾಗು ಎಲ್ಲಾ ಸಿಬ್ಬಂದಿಗಳನ್ನು ಕುರಿತು ಮಾತನಾಡಿ,ಪೊಲೀಸರು ಎಲ್ಲಾ ಕಡೆಗಳಲ್ಲಿ ಹೋಗಿ ಕರ್ತವ್ಯ ನಿರ್ವಹಿಸುವುದರಿಂದ ಸೊಂಕು ತಗಲುವ ಸಾಧ್ಯತೆ ಇರುತ್ತದೆ.ಆದ್ದರಿಂದ ನಿಮ್ಮ ಸೇವೆಯ ಜೊತೆಗೆ ಹೆಚ್ಚಿನ ಮುಂಜಾಗೃತೆ ವಹಿಸುವಂತೆ ತಿಳಿಸಿದರು.
ಯಾವುದೇ ವಾಹನ ಸೀಜ್ ಮಾಡುವಾಗ ಯಾವುದೇ ಕಾರಣಕ್ಕೂ ವಾಹನ ಸವಾರರನ್ನು ಮುಟ್ಟಬೇಡಿ,ಕೇವಲ ಲಾಠಿಯಿಂದ ನಿಲ್ಲಿಸಿ,ನಂತರ ದಂಡದ ರಸೀತಿ ಹರಿದು ಕೊಡುವ ಜೊತೆಗೆ ದಂಡದ ಹಣವನ್ನು ಒಂದು ಚೀಲದಲ್ಲಿ ಹಾಕಿಸಿಕೊಳ್ಳುವಂತೆ ತಿಳಿಸಿದರು.ಯಾವುದೇ ಕಾರಣಕ್ಕೂ ಲಾಠಿಯಿಂದ ಹಲ್ಲೆ ಮಾಡದಂತೆ ತಿಳಿಸಿದರು.ಕಡ್ಡಾಯವಾಗಿ ಮಾಸ್ಕ್ ಧರಿಸಿ,ಆಗಾಗ ಸ್ಯಾನಿಟೈಜರ್ ಅಥವಾ ಸಾಬೂನಿನಿಂದ ಕೈಗಳನ್ನು ತೊಳೆಯುತ್ತಿರಿ ಹೀಗೆ ಮಾಡಿದಾಗ ಯಾವುದೇ ಸೊಂಕು ತಗಲುವುದಿಲ್ಲ ಎಂದರು.
ಇನ್ನೂ ಎಲ್ಲರಿಗೂ ಕುಟುಂಬದ ಹೊನೆಯಿರುವುದರಿಂದ ಎಲ್ಲರು ಆದಷ್ಟು ಸ್ವಾಬ್ ಟೆಸ್ಟ್ ವರದಿ ಬರುವವರೆಗೆ ಬೇರೆ ಕಡೆಗಳಲ್ಲಿ ಪ್ರತ್ಯೇಕವಾಗಿರುವಂತೆ ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಂಟಲು ದ್ರವ ಮತ್ತು ಮೂಗಿನ ದ್ರವದ ಪರೀಕ್ಷೆಗೆ ಸಂಗ್ರಹಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ,ಪಿಐ ಎಸ್.ಎಮ್.ಪಾಟೀಲ ಹಾಗು ಪಿಎಸೈ ಮತ್ತು ಪೇದೆಗಳು ಹಾಜರಿದ್ದರು.