ಡಾ:ಬಿ.ಆರ್.ಅಂಬೇಡ್ಕರರ ಮನೆ ಮೇಲೆ ದಾಳಿ ಮಾಡಿದವರ ಗಡಿಪಾರ ಮಾಡಿ: ಹುಲಿಮನಿ

0
35

ಸುರಪುರ: ಭಾರತಕ್ಕೆ ಸಂವಿಧಾನ ಕೊಟ್ಟ ಮಹಾನ್ ಪುರುಷ ಡಾ:ಬಾಬಾ ಸಾಹೇಬ್ ಅಂಬೇಡ್ಕರ ಅವರ ಮುಂಬೈನ ದಾದರನಲ್ಲಿರುವ ಮನೆಯ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಮೂಲನಿವಾಸಿ ಅಂಬೇಡ್ಕರ ಸೇನೆ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಒತ್ತಾಯಿಸಿದರು.

ಸೇನೆಯಿಮದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರರನ್ನು ಇಡೀ ಜಗತ್ತು ಗೌರವಿಸುತ್ತದೆ.ಅಂತಹ ಮಹಾನ್ ಪುರುಷರ ಮನೆಯ ಕಿಟಿಕಿ ಬಾಗಿಲು ಗಾಜು ಹೊಡೆದು,ಸಿಸಿ ಕ್ಯಾಮಾರ್ ದ್ವಂಸಗೊಳಿಸಿ ಮತ್ತು ಮನೆಯ ಹಿಂಬದಿಯಲ್ಲಿನ ಮುದ್ರಣಾಲಯವನ್ನು ದ್ವಂಸಗೊಳಿಸಿ ವಿಕೃತಿ ಮೆರೆದ ದುಷ್ಕರ್ಮಿಗಳನ್ನು ದೇಶದ್ರೋಹಿಗಳಡಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಮತ್ತು ಅಂಬೇಡ್ಕರರ ಮನೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು.ಒಂದು ವೇಳೆ ಈ ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ದೇಶಾದ್ಯಂತ ಇರುವ ಅಂಬೇಡ್ಕರರ ಅನುಯಾಯಿಗಳು ಮತ್ತು ಅಭಿಮಾನಿಗಳು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕೇಂದ್ರ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸುವ ಜೊತೆಗೆ ದುಷ್ಕರ್ಮಿಗಳ ವಿರುಧ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರಾದಸಂಸ (ಅಂಬೇಡ್ಕರ ವಾದ) ಬಣದ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ,ರಾಜು ಬಡಿಗೇರ,ಹಣಮಂತ ಚಲುವಾದಿ,ನಬಿಸಾಬ್ ಗೊಡೆಕಾರ್,ಚಂದಪ್ಪ ಪಂಚಮ್,ವೆಂಕಟೇಶ ಬಡಿಗೇರ,ಹಣಮಂತ ರತ್ತಾಳ,ಶಿವಣ್ಣ ಸಾಸಗೇರಾ,ಶೇಖ್ ಅಲಿ,ಯಮನಪ್ಪ ಚಲವಾದಿ,ಉಮೇಶ ಹುಲಿಮನಿ,ಹಣಮಂತ ರತ್ತಾಳ,ಮಾನಪ್ಪ ರತ್ತಾಳ,ಭೀಮಣ್ಣ ಬೇವಿನಾಳ,ಸತೀಶ ಯಡಿಯಾಪುರ,ಯಲ್ಲಪ್ಪ ರತ್ತಾಳ,ಪರಶು ನಾಟಿಕಾರ್,ಮರೆಪ್ಪ ನಾಟಿಕಾರ್,ಬಡೆಸಾಬ ಬೋನ್ಹಾಳ,ಶರಣು ಹುಲಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here