ಅಂಬೇಡ್ಕರ್ ನಿವಾಸದ ಮೇಲೆ ದಾಳಿ: ದಸಂಸ ಆಕ್ರೋಶ

0
68

ವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ಕಿಡಿಗೇಡಿ ಜಾತಿವಾದಿಗಳು ನಡೆಸಿದ ದಾಳಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ರವಣಕುಮಾರ ಮೌಸಲಗಿ, ಬಾಬಾಸಾಹೇಬರ ಮನೆಗೆ ಕಲ್ಲೆಸೆದ ಕಿಡಿಗೇಡಿ ಮನುವಾದಿ ಪಿಂಡಗಳು ದೇಶದ ಪರಿಶಿಷ್ಟ ಜನಾಂಗವನ್ನು ಕೆರಳಿಸಿವೆ. ಸಂವಿಧಾನ ಶಿಲ್ಪಿಯ ನಿವಾಸದ ಸಿಸಿ ಕ್ಯಾಮೆರಾ, ಕಿಟಕಿ ಗಾಜು, ಹೂವಿನ ಗಿಡಗಳನ್ನು ಒಡೆದು ಹಾಕುವ ಮೂಲಕ ಜಾತಿವಾದದ ಬೇರಿಗೆ ನೀರು ಸುರಿದಿವೆ. ಯಾವುದೇ ಕಾರಣಕ್ಕೂ ಈ ದುಷ್ಕರ್ಮಿಗಳನ್ನು ಬಿಡಬಾರದು. ಇವರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಬೇಜವಾಬ್ದಾರಿ ತೋರಿದರೆ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಉಗ್ರ ಹೋರಾಟ ನಡೆಸಲು ಮುಂದಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಬೌದ್ಧ ಸಮಾಜದ ಹಿರಿಯ ಮುಖಂಡ ಚಂದ್ರಸೇನ ಮೇನಗಾರ ಹಾಗೂ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಬಾಬುಮಿಯ್ಯಾ ಮಾತನಾಡಿ, ಭಾರತ ಭವಿಷ್ಯ ಬರೆದ ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಅವರ ಮನೆಯ ಮೇಲೆ ದಾಳಿ ನಡೆಸಿರುವ ದುಷ್ಕೃತ್ಯದ ಹಿಂದೆ ಮನುವಾದಿ ಶಕ್ತಿಗಳ ಕೈವಾಡವಿದೆ. ಶೋಷಿತ ಜನಾಂಗದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಪ್ರಬಲ ಹೋರಾಟಗಳು ಬೆಳೆಯಬೇಕು ಎಂದರು.

ಮುಖಂಡರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ನಾಗೇಂದ್ರ ಜೈಗಂಗಾ, ಸಾಬಣ್ಣ ಗೊಡಗ್, ಶ್ರವಣಕುಮಾರ ಭಟರ್ಕಿ, ರಘುವೀರ ಪವಾರ, ಮಲ್ಲಿಕಾರ್ಜುನ ಮಾಶಾಳಕರ ಸೇರಿದಂತೆ ಅನೇಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ ಉಮಾಕಾಂತ ಹಳ್ಳೆ ಮತ್ತು ಪಿಎಸ್ಐ ವಿಜಯಕುಮಾರ ಭಾವಗಿ ಅವರು ರಾಷ್ಟ್ರಪತಿಗೆ ಬರೆದ ಮನವಿ ಪತ್ರ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here