ಕಲಬುರಗಿ: ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ಮುಂಬೈಯ ದಾದರ್ ಪ್ರದೇಶದ ರಾಜಗ್ರಹ ನಿವಾಸದಲ್ಲಿ ಧ್ವಂಸ ನಡಿಸಿರುವ ಕಿಡಿಗೇಡಿಗಳ ಬಂಧಿಸಿಬೇಕೆಂದು ನಯಾ ಸವೇರಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ವಿಕೃತ ಮೆರೆದ ಕಿಡಿಗೇಡಿಗಳು ಸಂಬಂಧಿಸಿದಂತೆ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ, ಮನೆಯ ಗಾಜಿನ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಅಲ್ಲದೆ ಹೂವಿನ ಮಡಿಕೆಗಳಿಗೆ ದೊಡ್ಡ ಹಾನಿಯಾಗಿದೆ.
ಇಂಥ ವಿಕೃತ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಾಧ್ಯ .ದೇಶವನ್ನು ರಕ್ಷಿಸುವ ಸಂವಿಧಾನವನ್ನು ಬರೆದ ಸಂವಿಧಾನಶಿಲ್ಪಿ ವಾಸವಿದ್ದ ಮನೆಗೆ ರಕ್ಷಣೆ ಇಲ್ಲಾಂದರೆ ಈ ದೇಶದ ಸಾಮಾಜಿಕ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವಂತಾಗಿದೆ.
ಈ ಘಟನೆಗೆ ರಾಷ್ಟ್ರದ್ರೋಹದ ಪ್ರಕಾರವೆಂದು ಪರಿಗಣಿಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹಿಸಿ ಕ್ರಮಕ್ಕೆ ಒತ್ತಾಯಿಸಿದರು.
ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ, ಸಲೀಮ್ ಅಹ್ಮದ್ ಚಿತಾಪುರ್, ಶೇಕ್ ಯುನುಸ್ ಅಲಿ, ಸೈಯದ್ ಏಜಾಜ್ ಅಲಿ ಇನಾಮದಾರ್, ಸಾದೀಕ್ ಪಟೇಲ್ ಯಳವಂತಗಿ, ಬಾಬಾ ಫಕ್ರುದ್ದಿನ್, ಗೀತಾ ಮುದುಗಲ್, ಸಂಗೀತ ಪಾಟೀಲ್, ರಾಬಿಯಾ ಶಿಕಾರಿ, ವಿಜಯಕುಮಾರ್, ಮುಬೀನ್ ಅನ್ಸಾರಿ, ಇಲಾಹಿ ಪಟೇಲ್ ಕುಳಗೇರಿ, ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.