ಸುರಪುರ: ನಗರದ ದೀವಳಗುಡ್ಡಾದಲ್ಲಿ ೧೭ಕ್ಕೂ ಹೆಚ್ಚು ಜನರಲ್ಲಿ ಮಹಾಮಾರಿ ಕೊರೊನಾ ವೈರಸ್ ಸೊಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೀವಳಗುಡ್ಡ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದರಿಂದ ಜನತೆಗೆ ಉದ್ಯೋಗವಿಲ್ಲದೆ ತೊಂದರೆಗೆ ಸಿಲುಕಿರುವುದನ್ನು ಅರಿತ ಟೀಂ ರಾಜುಗೌಡ ಸೇವಾ ಸಮಿತಿ ವತಿಯಿಂದ ದೀವಳಗುಡ್ಡದ ಮನೆ ಮನೆಗೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಅಕ್ಕಿ ಬೇಳೆ ಸಕ್ಕರೆ ಅಡುಗೆ ಎಣ್ಣೆ ಸೇರಿದಂತೆ ಅನೇಕ ವಸ್ತುಗಳುಳ್ಳ ಕಿಟ್ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಗಂಗಾಧರ ನಾಯಕ ,ಪರಶುರಾಮ ನಾಟೆಕಾರ್, ಪವನ ವಿಭೂತೆ,ತಿಗಳಪ್ಪ ಕವಡಿಮಟ್ಟಿ,ಚೇತನ್,ಪ್ರವೀಣ ವಿಭೂತೆ ಇದ್ದರು.